ಓದುವಂತೆ ಮಕ್ಕಳಿಗೆ ಒತ್ತಡ ಹೇರುವುದರಿಂದ ಆಗುವ ಕೆಟ್ಟ ಪರಿಣಾಮಗಳೇನು ಗೊತ್ತಾ..?
ವಿದ್ಯಾಭ್ಯಾಸಕ್ಕೆ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಕಠಿಣ ಕ್ರಮಗಳನ್ನ ಕೈಗೊಳ್ಳುವುದರಿಂದ ಮಕ್ಕಳು ಮತ್ತಷ್ಟು ಮಾನಸಿಕವಾಗಿ ಕುಗ್ಗುವುದು ಅಲ್ಲದೇ ಮೆದುಳಿನ ಶಕ್ತಿ ಮತ್ತಷ್ಟು ದುರ್ಬಲಗೊಳ್ಳುತ್ತದೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಮನೋವಿಜ್ಞಾನ ಮತ್ತು ಅಭಿವೃದ್ಧಿ ತಜ್ಞರು ನೀಡಿರುವ ವರದಿಯಲ್ಲಿ ಈ ಆತಂಕಕಾರಿ ಅಂಶವನ್ನ ಬಹಿರಂಗಪಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಮಾನಸಿಕವಾಗಿ ಹಾಗೂ ಓದುವಂತೆ ಹೆಚ್ಚಿನ ಒತ್ತಡವನ್ನಹೇರಲಾಗ್ತಿದೆ. ಕಠಿಣ ಕ್ರಮಗಳನ್ನ ಅನುಸರಿಸಲಾಗ್ತಿದೆ.
ಹೆಚ್ಚಿಕ ಅಂಕಗಳನ್ನ ಪಡೆಯಲೇ ಬೇಕೆಂಬ ಪೋಷಕರ ಒತ್ತಾಯದಿಂದ ಅನೇಕ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗ್ತಿದ್ದಾರೆ. ಈ ರೀತಿಯ ಬೆಳವಣಿಯಲ್ಲಿ ಅವರ ಮೆದುಳಿನ ಶಕ್ತಿ ಮತ್ತಷ್ಠು ಕುಂಠಿತಗೊಳ್ಳುತ್ತಿದೆ ಎನ್ನಲಾಗಿದೆ.
ಮಕ್ಕಳ ಬೆಳವಣಿಗೆಯ ಮೇಲೆ, ಅವರ ನಡತೆ, ಜೀವನದಲ್ಲಿ ಅವರ ಆಯ್ಕೆ ( ಸಕಾರಾತ್ಮಕವಾಗಿಯೂ ಇರಬಹುದು, ಅಥವ ನಕಾರಾತ್ಮಕವಾಗಿಯೂ ಇರಬಹುದು) ಎಲ್ಲವೂ ಕೂಡ ಇದರ ಭಾಗವಾಗಿರುತ್ತದೆ.
ಹೀಗಾಗಿ ಪೋಷಕರು ವಿದ್ಯಾಭ್ಯಾಸಕ್ಕಾಗಿ ಮಕ್ಕಳ ಮೇಲೆ ತೀರ ಕಠಿಣ ಕ್ರಮಗಳನ್ನ ತೆಗೆದುಕೊಳ್ಳದೇ ಒತ್ತಡ ಹೇರದೇ ಇರೋದು ಒಳ್ಳೆಯದು ಎಂಬುದು ತಜ್ಞರ ಸಲಹೆ.