ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಕರ್ಷಕ ಬಣ್ಣದಿಂದ ಕಂಗೊಳಿಸುವ ಕನಕಾಂಬರ ಹೂವಿನ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು..?

Namratha Rao by Namratha Rao
September 4, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಆಕರ್ಷಕ ಬಣ್ಣದಿಂದ ಕಂಗೊಳಿಸುವ ಕನಕಾಂಬರ ಹೂವಿನ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು..?

ನಮ್ಮ ದೇಶದಲ್ಲಿ ದೇಸಿ ಹೂಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ಅನೇಕ ಪ್ರಜಾತಿಯ ಹೂಗಳನ್ನ ಭಾರತದಲ್ಲಿ ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳುಸುವ ಹೂವುಗಳು ನಾನಾ ರೀತಿಯಲ್ಲಿ ನಾನಾ ಮಹತ್ವಗಳನ್ನ ಪಡೆದುಕೊಂಡಿದೆ. ಒಂದೊಂದೂ ಹೂವಿಗೂ ಅದರದ್ದೇ ಆದ ವಿಶೇಷತೆಗಳಿವೆ. ದೇವರಿಗೆ ಇಡುವುದರಿಂದ , ತಲೆಗೆ ಮುಡಿಯುವುದರಿಂದ ಅಲಂಕಾರಕ್ಕಾಗಿ ಬಳಸುವುದು, ಸಭೆ ಸಮಾರಂಭಗಳ ವರೆಗೂ ಹೂವಿಗೆ ನಮ್ಮಲ್ಲಿ ಅತಿ ಪ್ರಾಮುಖ್ಯತೆಯಿದೆ.

Related posts

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

July 8, 2026
ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

July 8, 2026

ಅಂದ್ಹಾಗೆ ದೇಸಿ ಹೂಗಳು ಅಂತ ತೆಗೆದುಕೊಂಡ್ರೆ ಅನೇಕ ಹೂಗಳನ್ನ ಪಟ್ಟಿ ಮಾಡಬಹುದು. ಲೆಕ್ಕವಿಲ್ಲದಷ್ಟು ಹೂಗಳಿವೆ. ಜಾಜಿ , ಮಲ್ಲಿಗೆ, ಮಳ್ಳೆ, ಕಾಕಡ, ಸೇವಂತಿಗೆ, ಚಿಂತಾಮಣಿ, ಚೆಂಡು ಹೂ , ಕನಕಾಂಬರಿಯೂ ಸಹ ಇದೇ ಪಟ್ಟಿಗೆ ಸೇರಿಕೊಳ್ಳುತ್ತೆ.

ಕನಕಾಂಬರ ಹೂವಿನ ಬಗ್ಗೆ ಅದರ ವಿಶೇಷತೆ ಬಗ್ಗೆ ತಿಳಿಯೋಣ..

ಸುಂದರು ಕಂದು ಬಣ್ಣದಲ್ಲಿ ( ಪೀಚ್ ) ಕಂಗೊಳಿಸುವ ಆಕರ್ಷಣೀಯ ಹೂ ಈ ಕನಕಾಂಬರಿ. ಈ ಹೂ ದೇವರಿಗೆ, ಮನೆಯಲ್ಲಿ ಅಲಂಕಾರಕ್ಕೆ, ಸಭೆ ಸಮಾರಂಭಗಳಿಗೆ ಉಪಯೋಗಿಸಲಾಗುತ್ತೆ. ಆದರೂ ಮುಡಿಯಲು ಮಲ್ಲಿಗೆ ಬಿಟ್ರೆ ಮಹಿಳೆಯರು ಯುವತಿಯರು, ಹುಡುಗಿಯರು ಹೆಚ್ಚು ಇಷ್ಟ ಪಡುವ ಹೂ ಅಂದ್ರೆ ಅದೇ ಕನಕಾಂಬರ.

ಹಿನ್ನೆಲೆ ಮತ್ತು ಈ ಹೂವಿನ ಗುಣ ಲಕ್ಷಣಗಳು

ಈ ಹೂ ಹೆಚ್ಚಾಗಿ ಶ್ರೀಲಂಕಾದಲ್ಲಿ ಹಾಗೂ ಭಾರತದಲ್ಲಿ ಬೆಳೆಯಲ್ಪಡುತ್ತೆ. ಅದರಲ್ಲೂ ವಿಶೇಷವಾಗಿ ನಮ್ಮ ದಕ್ಷಿಣ ಭಾರತದಲ್ಲಿ ಈ ಹೂವನ್ನ ಬೆಳೆಯಲಾಗುತ್ತೆ. ಇದೊಂದು ಆಕ್ಯಾಂಥೇಸಿಯಾ ಕುಟುಂಬದಲ್ಲಿನ ಹೂಬಿಡುವ ಸಸ್ಯವಾಗಿದೆ.  ಇದರ ಹೊರತಾಗಿ ಆಫ್ರಿಕಾದಲ್ಲೂ ಈ ಹೂಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಹೂಗಳು ಕದಿರು ಗೊಂಚಲಿನಲ್ಲಿ (ಸ್ಪೈಕ್) ಜೋಡಣೆಗೊಂಡಿವೆ. ಬಹಳ ಸುಂದರವಾದ ಅವುಗಳಲ್ಲಿ ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ ಹಾಗೂ ಅಚ್ಚಹಳದಿ ವರ್ಣವೈವಿಧ್ಯವಿದೆ. ಕೇಸರಿ ಬಣ್ಣದವಕ್ಕೆ ಒಳ್ಳೆಯ ಬೇಡಿಕೆ ಇದೆ. ಹೂಗಳಿಗೆ ಬ್ರ್ಯಾಕ್ಟು ಮತ್ತು ಬ್ರ್ಯಾಕ್ಟಿಯೋಲುಗಳಿವೆ. ದ್ವಿಲಿಂಗಿಗಳಾದ ಅವು ಉಭಯ ಪಾಶರ್ವ್‌ಸಮಾಂಗತೆಯುಳ್ಳವು. ಪುಷ್ಪಪಾತ್ರೆಯಲ್ಲಿ ಬುಡಭಾಗದಲ್ಲಿ ಕೂಡಿಕೊಂಡಿವೆ. ಕೇಸರಗಳು ನಾಲ್ಕು, ಹೂದಳಗಳಿಗೆ ಅಂಟಿಕೊಂಡಿವೆ. ಎರಡು ಕೇಸರಗಳು ಉಳಿದೆರಡಕ್ಕಿಂತ ಹೆಚ್ಚು ಉದ್ದವಾಗಿವೆ. ಸಾಮಾನ್ಯವಾಗಿ ಬೀಜದಿಂದ ಮತ್ತು ನೇರವಾಗಿ ಸಸಿಗಳನ್ನು ನಾಟಿ ಮಾಡುವುದರ ಮೂಲಕ ವೃದ್ಧಿ ಮಾಡುತ್ತಾರೆ.

ಉಪಯೋಗಗಳು

ಇನ್ನೂ ಅನೇಕ ಕಾರ್ಯಗಳಿಗೆ ಕನಕಾಂಬರ ಹೂ ಉಪಯೋಗಿಸಲಾಗುತ್ತೆ. ದೇವಾಲಯಗಳ ಮುಂದೆ ಅಲಂಕಾರಕ್ಕಿರಬಹುದು, ಮನೆಗಳ ಎದುರಿಗೆ ಅಲಂಕಾರಕ್ಕಿರಬಹುದು ಹೀಗೆ ಕನಕಾಂಬರ ಪಯೋಗಕ್ಕೆ ಬರುತ್ತೆ. ಇನ್ನೂ ಕನಕಾಂಬರ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹೂವಾಗಿದ್ದು, ಹಬ್ಬ ಹರಿದಿನ ಬಂತೆಂದ್ರೆ ಸಾಕು ಕನಕಾಂಬರದ ಬೆಲೆ ಗಗನಕ್ಕೇರಿಬಿಡುತ್ತೆ.

ವಿಶೇಶಷತೆಗಳು

ವಿಶೇಷ ಅಂದ್ರೆ ಮಲ್ಲಿಗೆ , ಕಾಕಡ , ಮಳ್ಳೆಯನ್ನೂ ಸಹ ತಲೆಗೆ ಮುಡಿಯಲಾಗುತ್ತೆ. ಆದ್ರೆ ಇವೆಲ್ಲವೂ ಸಹ ಅತಿ ಬೇಗನೆ ಬಾಡಿ ಹೋಗುತ್ತವೆ. ಆದರೆ ಕನಕಾಂಬರ ಮಾತ್ರ ಹಾಗಲ್ಲ. ಇದು ದಿನವಿಡೀ ಬಾಡದೇ ಕಾಂತಿ ಉಳಿಸಿಕೊಂಡು ಮಹಿಳೆಯರ ಕೇಶದ ಅಂದ ಹೆಚ್ಚಿಸುತ್ತೆ. ಹೀಗಾಗಿಯೇ  ಮಹಿಳೆಯರು ತಮ್ಮ ತಲೆಗೆ ಮುಟ್ಟಿಕೊಳ್ಳಲು ಕನಕಾಂಬರವನ್ನೇ ಹೆಚ್ಚು ಇಷ್ಟ ಪಡುತ್ತಾರೆ.

Tags: #saakshatvkanakambara flower - flowers specialities
ShareTweetSendShare
Join us on:

Related Posts

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

by Shwetha
July 8, 2026
0

ಮೂರನೇ ಟಿ20 ಕದನದಲ್ಲಿ ಇಂಗ್ಲೆಂಡ್ ತಂಡದ ಆರ್ಭಟಕ್ಕೆ ಭಾರತದ ಬ್ಯಾಟಿಂಗ್ ಪಡೆ ತರಗೆಲೆಯಂತೆ ಉದುರಿಹೋಗಿದೆ. ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ಆತುರದಲ್ಲಿ ಟೀಮ್ ಇಂಡಿಯಾ ತನ್ನ...

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

by Shwetha
July 8, 2026
0

ಬೆಂಗಳೂರು : ಮಲ್ಲೇಶ್ವರದ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ನಡೆದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್...

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

by Shwetha
July 8, 2026
0

ಮೈಸೂರು ದಸರಾ–2026ರ ಮಹೋತ್ಸವಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮತ್ತಿಗೋಡು ಆನೆ ಶಿಬಿರ ಹಾಗೂ ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡವು 20ಕ್ಕೂ...

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

by Shwetha
July 8, 2026
0

ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ...

E20 ಪೆಟ್ರೋಲ್‌ನಿಂದ ರಬ್ಬರ್ ಭಾಗಗಳಿಗೆ ಹಾನಿ ಸಾಧ್ಯ: ARAI ಎಚ್ಚರಿಕೆ

E20 ಪೆಟ್ರೋಲ್‌ನಿಂದ ರಬ್ಬರ್ ಭಾಗಗಳಿಗೆ ಹಾನಿ ಸಾಧ್ಯ: ARAI ಎಚ್ಚರಿಕೆ

by Shwetha
July 8, 2026
0

ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ (ARAI) ಪ್ರಕಾರ, E10 ಪೆಟ್ರೋಲ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಾಹನಗಳಲ್ಲಿ E20 ಪೆಟ್ರೋಲ್ ಬಳಸಿದರೆ ರಬ್ಬರ್‌ನಿಂದ ತಯಾರಿಸಲಾದ ಕೆಲವು ಎಂಜಿನ್ ಮತ್ತು ಇಂಧನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram