ಆಕರ್ಷಕ ಬಣ್ಣದಿಂದ ಕಂಗೊಳಿಸುವ ಕನಕಾಂಬರ ಹೂವಿನ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು..?
ನಮ್ಮ ದೇಶದಲ್ಲಿ ದೇಸಿ ಹೂಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ಅನೇಕ ಪ್ರಜಾತಿಯ ಹೂಗಳನ್ನ ಭಾರತದಲ್ಲಿ ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳುಸುವ ಹೂವುಗಳು ನಾನಾ ರೀತಿಯಲ್ಲಿ ನಾನಾ ಮಹತ್ವಗಳನ್ನ ಪಡೆದುಕೊಂಡಿದೆ. ಒಂದೊಂದೂ ಹೂವಿಗೂ ಅದರದ್ದೇ ಆದ ವಿಶೇಷತೆಗಳಿವೆ. ದೇವರಿಗೆ ಇಡುವುದರಿಂದ , ತಲೆಗೆ ಮುಡಿಯುವುದರಿಂದ ಅಲಂಕಾರಕ್ಕಾಗಿ ಬಳಸುವುದು, ಸಭೆ ಸಮಾರಂಭಗಳ ವರೆಗೂ ಹೂವಿಗೆ ನಮ್ಮಲ್ಲಿ ಅತಿ ಪ್ರಾಮುಖ್ಯತೆಯಿದೆ.
ಅಂದ್ಹಾಗೆ ದೇಸಿ ಹೂಗಳು ಅಂತ ತೆಗೆದುಕೊಂಡ್ರೆ ಅನೇಕ ಹೂಗಳನ್ನ ಪಟ್ಟಿ ಮಾಡಬಹುದು. ಲೆಕ್ಕವಿಲ್ಲದಷ್ಟು ಹೂಗಳಿವೆ. ಜಾಜಿ , ಮಲ್ಲಿಗೆ, ಮಳ್ಳೆ, ಕಾಕಡ, ಸೇವಂತಿಗೆ, ಚಿಂತಾಮಣಿ, ಚೆಂಡು ಹೂ , ಕನಕಾಂಬರಿಯೂ ಸಹ ಇದೇ ಪಟ್ಟಿಗೆ ಸೇರಿಕೊಳ್ಳುತ್ತೆ.
ಕನಕಾಂಬರ ಹೂವಿನ ಬಗ್ಗೆ ಅದರ ವಿಶೇಷತೆ ಬಗ್ಗೆ ತಿಳಿಯೋಣ..
ಸುಂದರು ಕಂದು ಬಣ್ಣದಲ್ಲಿ ( ಪೀಚ್ ) ಕಂಗೊಳಿಸುವ ಆಕರ್ಷಣೀಯ ಹೂ ಈ ಕನಕಾಂಬರಿ. ಈ ಹೂ ದೇವರಿಗೆ, ಮನೆಯಲ್ಲಿ ಅಲಂಕಾರಕ್ಕೆ, ಸಭೆ ಸಮಾರಂಭಗಳಿಗೆ ಉಪಯೋಗಿಸಲಾಗುತ್ತೆ. ಆದರೂ ಮುಡಿಯಲು ಮಲ್ಲಿಗೆ ಬಿಟ್ರೆ ಮಹಿಳೆಯರು ಯುವತಿಯರು, ಹುಡುಗಿಯರು ಹೆಚ್ಚು ಇಷ್ಟ ಪಡುವ ಹೂ ಅಂದ್ರೆ ಅದೇ ಕನಕಾಂಬರ.
ಹಿನ್ನೆಲೆ ಮತ್ತು ಈ ಹೂವಿನ ಗುಣ ಲಕ್ಷಣಗಳು
ಈ ಹೂ ಹೆಚ್ಚಾಗಿ ಶ್ರೀಲಂಕಾದಲ್ಲಿ ಹಾಗೂ ಭಾರತದಲ್ಲಿ ಬೆಳೆಯಲ್ಪಡುತ್ತೆ. ಅದರಲ್ಲೂ ವಿಶೇಷವಾಗಿ ನಮ್ಮ ದಕ್ಷಿಣ ಭಾರತದಲ್ಲಿ ಈ ಹೂವನ್ನ ಬೆಳೆಯಲಾಗುತ್ತೆ. ಇದೊಂದು ಆಕ್ಯಾಂಥೇಸಿಯಾ ಕುಟುಂಬದಲ್ಲಿನ ಹೂಬಿಡುವ ಸಸ್ಯವಾಗಿದೆ. ಇದರ ಹೊರತಾಗಿ ಆಫ್ರಿಕಾದಲ್ಲೂ ಈ ಹೂಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಹೂಗಳು ಕದಿರು ಗೊಂಚಲಿನಲ್ಲಿ (ಸ್ಪೈಕ್) ಜೋಡಣೆಗೊಂಡಿವೆ. ಬಹಳ ಸುಂದರವಾದ ಅವುಗಳಲ್ಲಿ ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ ಹಾಗೂ ಅಚ್ಚಹಳದಿ ವರ್ಣವೈವಿಧ್ಯವಿದೆ. ಕೇಸರಿ ಬಣ್ಣದವಕ್ಕೆ ಒಳ್ಳೆಯ ಬೇಡಿಕೆ ಇದೆ. ಹೂಗಳಿಗೆ ಬ್ರ್ಯಾಕ್ಟು ಮತ್ತು ಬ್ರ್ಯಾಕ್ಟಿಯೋಲುಗಳಿವೆ. ದ್ವಿಲಿಂಗಿಗಳಾದ ಅವು ಉಭಯ ಪಾಶರ್ವ್ಸಮಾಂಗತೆಯುಳ್ಳವು. ಪುಷ್ಪಪಾತ್ರೆಯಲ್ಲಿ ಬುಡಭಾಗದಲ್ಲಿ ಕೂಡಿಕೊಂಡಿವೆ. ಕೇಸರಗಳು ನಾಲ್ಕು, ಹೂದಳಗಳಿಗೆ ಅಂಟಿಕೊಂಡಿವೆ. ಎರಡು ಕೇಸರಗಳು ಉಳಿದೆರಡಕ್ಕಿಂತ ಹೆಚ್ಚು ಉದ್ದವಾಗಿವೆ. ಸಾಮಾನ್ಯವಾಗಿ ಬೀಜದಿಂದ ಮತ್ತು ನೇರವಾಗಿ ಸಸಿಗಳನ್ನು ನಾಟಿ ಮಾಡುವುದರ ಮೂಲಕ ವೃದ್ಧಿ ಮಾಡುತ್ತಾರೆ.
ಉಪಯೋಗಗಳು
ಇನ್ನೂ ಅನೇಕ ಕಾರ್ಯಗಳಿಗೆ ಕನಕಾಂಬರ ಹೂ ಉಪಯೋಗಿಸಲಾಗುತ್ತೆ. ದೇವಾಲಯಗಳ ಮುಂದೆ ಅಲಂಕಾರಕ್ಕಿರಬಹುದು, ಮನೆಗಳ ಎದುರಿಗೆ ಅಲಂಕಾರಕ್ಕಿರಬಹುದು ಹೀಗೆ ಕನಕಾಂಬರ ಪಯೋಗಕ್ಕೆ ಬರುತ್ತೆ. ಇನ್ನೂ ಕನಕಾಂಬರ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹೂವಾಗಿದ್ದು, ಹಬ್ಬ ಹರಿದಿನ ಬಂತೆಂದ್ರೆ ಸಾಕು ಕನಕಾಂಬರದ ಬೆಲೆ ಗಗನಕ್ಕೇರಿಬಿಡುತ್ತೆ.
ವಿಶೇಶಷತೆಗಳು
ವಿಶೇಷ ಅಂದ್ರೆ ಮಲ್ಲಿಗೆ , ಕಾಕಡ , ಮಳ್ಳೆಯನ್ನೂ ಸಹ ತಲೆಗೆ ಮುಡಿಯಲಾಗುತ್ತೆ. ಆದ್ರೆ ಇವೆಲ್ಲವೂ ಸಹ ಅತಿ ಬೇಗನೆ ಬಾಡಿ ಹೋಗುತ್ತವೆ. ಆದರೆ ಕನಕಾಂಬರ ಮಾತ್ರ ಹಾಗಲ್ಲ. ಇದು ದಿನವಿಡೀ ಬಾಡದೇ ಕಾಂತಿ ಉಳಿಸಿಕೊಂಡು ಮಹಿಳೆಯರ ಕೇಶದ ಅಂದ ಹೆಚ್ಚಿಸುತ್ತೆ. ಹೀಗಾಗಿಯೇ ಮಹಿಳೆಯರು ತಮ್ಮ ತಲೆಗೆ ಮುಟ್ಟಿಕೊಳ್ಳಲು ಕನಕಾಂಬರವನ್ನೇ ಹೆಚ್ಚು ಇಷ್ಟ ಪಡುತ್ತಾರೆ.