ಕೋವಿಡ್ 3ನೇ ಅಲೆ ಭೀತಿ ನಡುವೆ – ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಅನುಮತಿ..!
ಕೊರೊನಾ 3ನೇ ಅಲೆ ಭೀತಿಯಲ್ಲಿ ದೇಶದ ಜನರು ಇದ್ದಾರೆ. ಈ ನಡುವೆಯೇ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಡಿಸಿಜಿಐಯಿಂದ ಅನುಮತಿ ಸಿಕ್ಕಿದೆ.
ಕೋವಿಡ್–19 ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ಲೈಟ್ ಏಕ ಡೋಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ ಅನುಮತಿ ನೀಡಿದೆ.
ಸ್ಪುಟ್ನಿಕ್ ಲೈಟ್ ಕೋವಿಡ್ ವಿರುದ್ಧ ಶೇ 78.6ರಿಂದ ಶೇ 83.7ರಷ್ಟು ಪರಿಣಾಮಕಾರಿಯಾಗಿದೆ ಎಂಬ ಅಧ್ಯಯನ ವರದಿ ಬಂದ ಬೆನ್ನಲ್ಲೇ 3ನೇ ಹಂತದ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.
ಅರ್ಜೆಂಟೀನಾದಲ್ಲಿ 40,000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಮಾಡುವಲ್ಲಿ ಸ್ಪುಟ್ನಿಕ್ ಲೈಟ್ ಶೇ 82.1ರಿಂದ ಶೇ 87.6ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದುಬಂದಿತ್ತು.








