ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ | ರೇಸ್ ನಲ್ಲಿ ವೀರೂ, ರಾಹುಲ್..!
ಹೈದರಾಬಾದ್ : ಐಸಿಸಿ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಬರುವುದು ಪಕ್ಕಾ ಆಗಿದೆ.
ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಪಕ್ಕಾ ಆಗಿದೆ.
ಈ ಬಗ್ಗೆ ಸ್ವತಃ ರವಿಶಾಸ್ತ್ರಿ ಅವರೇ ಬಿಸಿಸಿಐ ಜೊತೆ ಮಾತನಾಡಿದ್ದಾರಂತೆ.
ಅಂದಹಾಗೆ ರವಿಶಾಸ್ತ್ರಿ 2017ರಲ್ಲಿ ಟೀಂ ಇಂಡಿಯಾದ ಗುರುವಿನ ಸ್ಥಾನ ಅಲಂಕರಿಸಿದರು.
ಬಳಿಕ 2019ರಲ್ಲಿ ಮತ್ತೆ ಅವರ ಕೋಚ್ ಅವಧಿಯನ್ನು ವಿಸ್ತರಿಸಿ ಐಸಿಸಿ ಟಿ-20 ವಿಶ್ವಕಪ್ ಮುಕ್ತಾಯದವರೆಗೆ ಕೋಚ್ ಆಗಿ ಮುಂದುವರೆಸಲಾಗಿತ್ತು.
ಅದರಂತೆ ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ರವಿಶಾಸ್ತ್ರಿ ತಮ್ಮ ಸ್ಥಾನವನ್ನು ತ್ಯಜಿಸೋದು ಪಕ್ಕಾ ಆಗಿದೆ.
ಕೇವಲ ರವಿಶಾಸ್ತ್ರಿ ಅಲ್ಲದೆ ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿರುವ ಶ್ರೀಧರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಇನ್ನು ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾದ ಕೋಚ್ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಥಟ್ ಅಂತ ಹೊಡೆಯುವ ಉತ್ತರ ರಾಹುಲ್ ದ್ರಾವಿಡ್.
ಹೌದು..! ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಹುದ್ದೆಯನ್ನು ಅಲಂಕರಿಸಬೇಕು ಎಂದು ಸಾಕಷ್ಟು ವರ್ಷಗಳಿಂದ ಮಾತುಗಳು ಕೇಳಿಬರುತ್ತಿವೆ.
ಬಿಸಿಸಿಐ ಕೂಡ ರಾಹುಲ್ ಗೆ ಈ ಆಫರ್ ನೀಡಿದೆ. ಆದ್ರೆ ದ್ರಾವಿಡ್ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ.
ಬದಲಾಗಿ ಭಾರತದ ಕಿರಿಯ ತಂಡದ ಕೋಚ್ ಆಗಿ ಕಾರ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನ ಕೋಚ್ ರೇಸ್ ನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಕಾಣಿಸಿಕೊಂಡಿದ್ದಾರೆ.
ಆದ್ರೆ ಈಗಾಗಲೇ ಟೀಂ ಇಂಡಿಯಾ ಕೋಚ್ ಆಗಿ ಅನುಭವ ಹೊಂದಿರುವ ರಾಹುಲ್ ದ್ರಾವಿಡ್ ಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.









