“ಅಧಿಕಾರಿಗಳಿರೋದೇ ನಮ್ಮ ಚಪ್ಪಲಿ ಎತ್ತಿಕೊಳ್ಳುವುದಕ್ಕೆ” : ಉಮಾಭಾರತಿ ವಿವಾದ..!
ಮಧ್ಯಪ್ರದೇಶ : ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನೇ ನೀಡುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವೆ , ಬಿಜೆಪಿ ನಾಯಕಿ ಉಮಾಭಾರತಿ ಇದೀಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಉಮಾಭಾರತಿ ಅವರು “ಅಧಿಕಾರಿಗಳಿರೋದೇ ನಮ್ಮ ಚಪ್ಪಲಿ ಎತ್ತಿಕೊಳ್ಳುವುದಕ್ಕೆ” ಎಂದು ಹೇಳಿರುವ ಹೇಳಿಕೆ ಇದೀಗ ಭಾರೀ ವೈರಲ್ ಆಗ್ತಿದ್ದು, ಎಲ್ಲೆಡೆಯಿಂದ ಉಮಾಭಾರತಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.
ಅಧಿಕಾರಿಗಳು ಏನೂ ಅಲ್ಲ, ಅವರು ಇರುವದೇ ನಮ್ಮ ಚಪ್ಪಲಿಗಳನ್ನ ಎತ್ತಿಕೊಳ್ಳುವುದಕ್ಕೆ. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ. ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ನಂತರ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದಿರುವ ವಿಡಿಯೋ ಹರಿದಾಡ್ತಿದೆ.
ಭಾರತದಲ್ಲಿ ಹೆಚ್ಚುವರಿ ಕೋವಿಡ್ ಲಸಿಕೆ ಬೂಸ್ಟರ್ ನ ಅಗತ್ಯವಿದ್ಯಾ..?
ರಾಜಕಾರಣಿಗಳಾದ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಉಮಾ ಭಾರತಿ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ. ವಿವಾದಾತ್ಮಕ ಹೇಳಿಕೆಯ ವೀಡಿಯೋ ವೈರಲ್ ಆಗಿದ್ದು, ಉಮಾಭಾರತಿ ನಡೆಗೆ ಭಾರೀ ಟೀಕೆ ವ್ಯಕ್ತವಾಗ್ತಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಮಾಭಾರತಿ ನನ್ನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅಸಮಂಜಸವಾದ ಭಾಷೆ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.








