ಕೋವಿಡ್ -19 : ರೋಗಿಗಳಿಗೆ ಕ್ಯಾಸಿರಿವಿಮಾಬ್ , ಇಮ್ ಡೆವಿಮಾಬ್ ಚಿಕಿತ್ಸೆ ಶಿಫಾರಸು ಮಾಡಿದ WHO
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ..
ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ..
ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕಾ ಕಂಪನಿಗಳಿಗೆ ಮುಕ್ತ ಆಹ್ವಾನ..!
ಇನ್ನೂ ಕೊರೊನಾ ತೀವ್ರತೆ ಹೆಚ್ಚಾಗ್ತಿರೋದ್ರಿಂದಾಗಿ ರೋಗಿಗಳಿಗೆ ಎರಡು ಪ್ರತಿಕಾಯ ಚಿಕಿತ್ಸೆಗಳ ಸಂಯೋಜನೆಯನ್ನು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇದೀಗ WHO ಮಾರ್ಗಸೂಚಿ ಅಭಿವೃದ್ಧಿ ಸಮಿತಿಯು ಕೋವಿಡ್ -19 ಪೀಡಿತ ರೋಗಿಗಳ ಎರಡು ನಿರ್ದಿಷ್ಟ ಗುಂಪುಗಳಿಗೆ ಕ್ಯಾಸಿರಿವಿಮಾಬ್ ಮತ್ತು ಇಮ್ ಡೆವಿಮಾಬ್ ಪ್ರತಿಕಾಯಗಳನ್ನು ಸಂಯೋಜಿಸುವ ಚಿಕಿತ್ಸೆಯನ್ನು ಶಿಫಾರಸು ಮಾಡಿದೆ.
ಮೊದಲನೆಯದಾಗಿ ಗಂಭೀರ ಸ್ಥಿತಿಯಿಲ್ಲದವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಇನ್ನೂ ತೀವ್ರವಾದ ಹಂತದ ಕೋವಿಡ್ -19 ಹೊಂದಿರುವವರ ದೇಹದಲ್ಲಿ ಕೊರೊನಾಗೆ ಪ್ರತಿಕಾಯ ಉತ್ಪಾದನೆ ಆಗುತ್ತಿಲ್ಲ ಎಂದರ್ಥ ಎಂದು ತಿಳಿಸಲಾಗಿದೆ.
ಇನ್ನೂ ಮೊದಲ ಶಿಫಾರಸು ಇನ್ನೂ ಉನ್ನತ ಪರಿಶೀಲನೆಗೆ ಒಳಪಡದ ಮೂರು ಪ್ರಯೋಗಗಳ ಹೊಸ ಪುರಾವೆಗಳನ್ನು ಆಧರಿಸಿದೆ.
ಮತ್ತೆ ಕೋಮು ರಾಜಕೀಯಕ್ಕೆ ಬಿಜೆಪಿ ವಾಪಸ್ – ಮಾಯಾವತಿ
ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಕ್ಯಾಸಿರಿವಿಮಾಬ್ ಮತ್ತು ಇಮ್‌ಡಿವಿಮಾಬ್ ಚಿಕಿತ್ಸೆ ಕಡಿಮೆ ಮಾಡಬಹುದು.
ಲಸಿಕೆ ಹಾಕಿಸಿಕೊಳ್ಳದ, ರೋಗನಿರೋಧಕ ಶಕ್ತಿ ಹೆಚ್ಚಾಗಿರದ, ವಯಸ್ಸಾದವರನ್ನ ಅಪಾಯದಲ್ಲಿರುವ ರೋಗಿಗಳು ಎಂದು ಪರಿಗಣಿಸಿ ರೋಗಲಕ್ಷಣಗಳ ಅವಧಿಯನ್ನು ಕಡಿಮೆ ಮಾಡಬಹುದು ಎಂದು ಪ್ರಯೋಗದಲ್ಲಿ ತಿಳಿದುಬಂದಿದೆ.