ಜಗಳದಲ್ಲಿ ಹೆಂಡತಿಯ ಮೂಗನ್ನೇ ಕಚ್ಚಿದ ಪತಿರಾಯ..!
ಮಧ್ಯಪ್ರದೇಶ : ಗಂಡ ಹೆಂಡತಿ ಜಗಳ ಕೆಲವೊಮ್ಮೆ ತೀವ್ರ ವಿಕೋಪಕ್ಕೆ ತೆರಳಿ ನಾನಾ ಅನಾಹುತಗಳಿಗೂ ಸಾಕ್ಷಿಯಾಗುತ್ತದೆ. ಅಂತಹ ಪ್ರಕಪ್ರಕರಣಗಳು ಉದಾಹರಣೆ ರೂಪದಲ್ಲಿ ಬೆಳಕಿಗೆ ಬಂದಿದೆ. ಆದ್ರೆ ಇಂತಹ ಕೌಟುಂಬಿಕ ಕಲಹದ ನಡುವೆ ಜಗಳದ ವೇಳೆ ಗಂಡನೊಬ್ಬ ತನ್ನ ಹೆಂಡತಿಯ ಮೂಗನ್ನೇ ಕಚ್ಚಿರುವ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ಅಲೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನೇಶ್ ಹಾಗೂ ಟೀನಾ ಎಂಬುವವರು 2008ರಲ್ಲಿ ಉಜ್ಜನಿಯಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪತಿ ದಿನೇಶ್ ನಿರುದ್ಯೋಗಿ ಮತ್ತು ಮದ್ಯವ್ಯಸನನಾಗಿದ್ದು, ಮದುವೆಯಾದ ತಕ್ಷಣ ನಾನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದೆ. ದಿನೇಶ್ ಕಿರುಕುಳ ತಾಳಾಲಾರದೇ ನನ್ನ ಹೆಣ್ಣುಮಕ್ಕಳೊಂದಿಗೆ ತಾಯಿಯ ಮನೆಗೆ ಹೋಗಿ ಅಡುಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. 2019ರಲ್ಲಿ ನನ್ನ ಪತಿಯಿಂದ ವಿಚ್ಛೇದನೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಪತ್ನಿ ಟೀನಾ ಹೇಳಿಕೊಂಡಿದ್ದಾರೆ.
ಇನ್ನೂ ಇತ್ತೀಚೆಗೆ ದಿನೆಶ್ ನನ್ನ ಪೋಷಕರ ಮನೆಗೆ ಭೇಟಿ ನೀಡಿ ಈ ವಿಚಾರವಾಗಿ ಚರ್ಚೆ ನಡೆಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ಶುರುವಾಯ್ತು. ದಿನೇಶ್ ಪುತ್ರಿಯರ ಮುಂದೆಯೇ ನನ್ನ ಮೇಲೆ ಹಲ್ಲೆ ನಡೆಸಿ ಹಲ್ಲಿನಿಂದ ಮೂಗನ್ನು ಕಚ್ಚಿದ್ದಾರೆ. ನಂತರ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಇದ್ರಿಂದ ಆತ ಗಾಬರಿಯಾಗಿ ಸ್ಥಳದಿಂದ ಪಾರಾರಿಯಾಗಿ ಆರೋಪಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಬಂದು ಟೀನಾರನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪತಿ ದಿನೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.