ನೆರೆ ಮನೆಯವರ ಜೊತೆಗೆ ಜಗಳಕ್ಕೆ ಸಾಥ್ ಕೊಡದಕ್ಕೆ ಪತ್ನಿ ಕೊಂದ ಪತಿ..!
ಮುಂಬೈ : ನೆರೆ ಮನೆಯವರ ಜೊತೆಗೆ ಗಲಾಟೆ ಮಾಡುತ್ತಿದ್ದಾಗ ಜಗಳಕ್ಕೆ ಸಾಥ್ ನೀಡದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಂದಿರುವ ವಿಲಕ್ಷಣ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಿರಾರ್ ಸಮೀಪದ ಗಾಂಧಿ ಚೌಕ್ ನಿವಾಸಿಯಾದ 28 ವರ್ಷದ ಯುವಕನೊಬ್ಬ ಫ್ಲಾಟ್ ಬಳಿ ಒದ್ದೆಯಾದ ಬಟ್ಟೆಯನ್ನು ನೇತು ಹಾಕಿದ್ದಕ್ಕೆ ನೆರೆಮನೆಯವರೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳವಾಡಲು ಸಾಥ್ ನೀಡದಕ್ಕೆ ಪತ್ನಿ ಹಾಗೂ ಅತ್ತೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪತ್ನಿ ಸಾವನಪ್ಪಿದ್ದು, ಅತ್ತೆಯ ಸ್ಥಿತಿ ಗಂಭೀರವಾಗಿರೋದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಪಶ್ಚಿಮ ರೈಲ್ವೆಯಲ್ಲಿ ಫ್ರೀಲಾನ್ಸ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡ್ತಿರುವ ಜಗದೀಶ್ ಗುರವ್ ಎಂಬಾತ ರಾಮಚಂದ್ರನಗರದ ತನ್ನ ಮನೆಗೆ ಭೇಟಿ ನೀಡಿದ್ದಾನೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರ ಜೊತೆಗೆ ಗಲಾಟೆ ಶುರುಮಾಡಿದ್ದಾನೆ. ಈ ವೇಳೆ ನೆರೆಮನೆಯವರು ಗೌರವ್ ಗೆ ಒಡೆದಿದ್ದಾರೆ. ವಿವಾದದ ನಂತರ, ಗುರವ್ ತನ್ನ ಪತ್ನಿ ಸುಪ್ರಿಯಾ (28) ಗೆ ಸಹಾಯಕ್ಕಾಗಿ ಕರೆ ಮಾಡಿದ್ದಾನೆ. ಆದ್ರೆ ಆಗ ಆಕೆ ಗಾಂಧಿ ಚೌಕ್‌ನಲ್ಲಿರುವ ತನ್ನ ತಾಯಿ ಸುಷ್ಮಾ ಶೆಟ್ಟಿಯ ಮನೆಯಲ್ಲಿದ್ದಳು ಮತ್ತು ಕೆಲಸಗಳಲ್ಲಿ ನಿರತನಾಗಿದ್ದಳು.
ಯುಪಿ : 17 ವರ್ಷದ ಬಾಲಕಿಯನ್ನು ಅಪಹರಿಸಿ, 3 ತಿಂಗಳು ಅತ್ಯಾಚಾರವೆಸಗಿದ ತಾಂತ್ರಿಕ
ಹೀಗಾಗಿ ಆಕೆ ಆತನ ಸಹಾಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದ ಕುಪಿತಗೊಂಡ ಗೌರವ್ ಸುಷ್ಮಾಳ ಮನೆಗೆ ಹೋಗಿ ಅವಳ ತಲೆಯನ್ನು ಗೋಡೆಗೆ ಒಡೆದು ಚಾಕುವಿನಿಂದ ಆಕೆಗೆ 4 ಬಾರಿ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಸುಪ್ರಿಯಾ ಸಾವನಪ್ಪಿದ್ದಾರೆ. ಈ ವೇಲೆ ತಡೆಯಲು ಹೋದ ಅತ್ತೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೊಲೆಯಾದ ಸುಪ್ರಿಯಾ ಹಾಗೂ ಆರೋಪಿ ಗೌರವ್ ದಂಪತಿಗೆ ಮೂವರು ಮಕ್ಕಳಿದ್ದಾರೆ. ಘಟನೆ ನಡೆದ ತಕ್ಷಣವೇ ಗೌರವ್ ಗಾಬರಿಯಾಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಅತ್ತೆಯನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೌರವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.








