ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

4 ವಿವಿಧ ಬಗೆಯ ರುಚಿಕರ ಅಡುಗೆ ರೆಸಿಪಿಗಳು

Namratha Rao by Namratha Rao
October 8, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

4 ವಿವಿಧ ಬಗೆಯ ರುಚಿಕರ ಅಡುಗೆ ರೆಸಿಪಿಗಳು

1. ಹೆಸರುಬೇಳೆ ಸಬ್ಬಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು

Related posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

June 24, 2026

ಹೆಸರುಬೇಳೆ – 1ಕಪ್
ಸಬ್ಬಕ್ಕಿ – 1/2 ಕಪ್
ತೆಂಗಿನತುರಿ – 1ಕಪ್
ಗಸಗಸೆ – 2 ಚಮಚ
ಅಕ್ಕಿ – 2 ಚಮಚ
ಏಲಕ್ಕಿ – 2 ಎಸಳು
ಬೆಲ್ಲ – 1 1/2 ಕಪ್
ಗೋಡಂಬಿ ದ್ರಾಕ್ಷಿ ತುಪ್ಪ – ಸ್ವಲ್ಪ

ಮಾಡುವ ವಿಧಾನ
Saakshatv cooking recipe hesarubele sabbakki payasam
ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು ಇಟ್ಟುಕೊಳ್ಳಿ. ನಂತರ ಗಸಗಸೆ, ಅಕ್ಕಿ, ಹೆಸರುಬೇಳೆಗಳನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಳ್ಳಿ. ಬಳಿಕ ಕುಕ್ಕರ್ ಗೆ ಹುರಿದ ಹೆಸರುಬೇಳೆ, ಸಬ್ಬಕ್ಕಿಯನ್ನು ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ 3 ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ.

ಈಗ ತೆಂಗಿನತುರಿ, ಏಲಕ್ಕಿ, ಹುರಿದಿಟ್ಟುಕೊಂಡ ಗಸಗಸೆ ಮತ್ತು ಅಕ್ಕಿಯ ಜೊತೆಗೆ ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಬೆಲ್ಲಕ್ಕೆ ನೀರು ಹಾಕಿ ಕುದಿಸಿ ಇಟ್ಟುಕೊಳ್ಳಿ.
ಈಗ ಪಾತ್ರೆಗೆ ನೀರು ಮತ್ತು ಬೆಲ್ಲ ಸೇರಿಸಿ ಕುದಿಸಿ. ಬೆಲ್ಲದ ಪಾಕ ಸಿದ್ಧವಾದ ಬಳಿಕ ಅದಕ್ಕೆ ಬೇಯಿಸಿ ಇಟ್ಟುಕೊಂಡ ಹೆಸರುಬೇಳೆ, ಸಬ್ಬಕ್ಕಿ ಮತ್ತು ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕಲಸಿ ಕುದಿಸಿ. ಕುದಿ ಬಂದ ನಂತರ ಹುರಿದ ಗೋಡಂಬಿ ದ್ರಾಕ್ಷಿ ಗಳನ್ನು ಸೇರಿಸಿ. ಈಗ ರುಚಿಯಾದ ಹೆಸರುಬೇಳೆ ಸಬ್ಬಕ್ಕಿ ಪಾಯಸ ಸವಿಯಲು ಸಿದ್ಧವಾಗಿದೆ.

ಬಗೆ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ

2. ನೆಲಕಡಲೆ ಉಂಡೆ

ಬೇಕಾಗುವ ಸಾಮಗ್ರಿಗಳು
ಶೇಂಗಾ/ನೆಲಕಡಲೆ – 2 ಕಪ್
ಬೆಲ್ಲ – 2 ಕಪ್
ತುಪ್ಪ – 2 ಚಮಚ

ಮಾಡುವ ವಿಧಾನ:
ಮೊದಲಿಗೆ ನೆಲಕಡಲೆಯನ್ನು ಸಣ್ಣ ಉರಿಯಲ್ಲಿ ಹುರಿದು, ಅದರ ಸಿಪ್ಪೆಗಳನ್ನು ತೆಗೆಯಿರಿ. ಬಳಿಕ ನೆಲಕಡಲೆಗಳನ್ನು ಹುಡಿ ಮಾಡಿಕೊಳ್ಳಿ.
Saakshatv cooking recipe how to prepare peanut laddu
ನಂತರ ಬಾಣಲೆ ಬಿಸಿ ಮಾಡಿ ಬೆಲ್ಲವನ್ನು ಸೇರಿಸಿ, ಸ್ವಲ್ಪ ನೀರಿನ ಜೊತೆ ಕುದಿಯಿಸಿ. ಪಾಕ ಬಂದ ಬಳಿಕ ತುಪ್ಪವನ್ನು ಸೇರಿಸಿ ಮತ್ತು ‌ಅದಕ್ಕೆ ಹುಡಿ ಮಾಡಿಕೊಂಡ ನೆಲಕಡಲೆ ಹುಡಿಯನ್ನು ಸೇರಿಸಿ. ಚೆನ್ನಾಗಿ ಕಲಸಿ. ಒಲೆಯಿಂದ ಕೆಳಗಿಳಿಸಿ, ಪಾಕ ಆರಿದ ನಂತರ ಉಂಡೆ ಕಟ್ಟಿ. ರುಚಿಯಾದ ನೆಲಕಡಲೆ ಉಂಡೆ ಸವಿಯಲು ಸಿದ್ಧವಾಗಿದೆ.

5 ವಿವಿಧ ಬಗೆಯ ರೊಟ್ಟಿಗಳ ರೆಸಿಪಿಗಳು ನಿಮಗಾಗಿ..!

3. ಕೊಬ್ಬರಿ ಬಿಸ್ಕೆಟ್

ಬೇಕಾಗುವ ‌ಪದಾರ್ಥಗಳು

ಬೆಣ್ಣೆ – 1/2 ಕಪ್
ಸಕ್ಕರೆ ಹುಡಿ – 3/4 ಕಪ್
ಕೊಬ್ಬರಿ ಪುಡಿ – 1ಕಪ್
ಮೈದಾ – 1 ಕಪ್
ಬೇಕಿಂಗ್ ಪೌಡರ್ – 1/2 ಚಮಚ
ಹಾಲು – 2 – 3 ಚಮಚ

ಮಾಡುವ ವಿಧಾನ
Saakshatv cooking tips how to prepare coconut biscuits
ಮೊದಲಿಗೆ ಪಾತ್ರೆಗೆ ಬೆಣ್ಣೆ ಹಾಕಿ ಚೆನ್ನಾಗಿ ಬೀಟ್ ಮಾಡಿ. ನಂತರ ಸಕ್ಕರೆ ಪುಡಿ ‌ಸೇರಿಸಿ ಮತ್ತೆ ಬೀಟ್ ಮಾಡಿ ಚೆನ್ನಾಗಿ ಬೆರೆಸಿ. ಬಳಿಕ ಕೊಬ್ಬರಿ ಪುಡಿ, ಮೈದಾ, ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಇದಕ್ಕೆ 2 ರಿಂದ 3 ಚಮಚ ಹಾಲು ಸೇರಿಸಿ ಚಪಾತಿ ‌ಹಿಟ್ಟಿನ ಹದಕ್ಕೆ ಕಲಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ತುಪ್ಪ ಸವರಿದ ತಟ್ಟೆಯಲ್ಲಿ ಇಟ್ಟು ಮೆಲ್ಲಗೆ ಸ್ವಲ್ಪ ಒತ್ತಿ. ಪಾನ್ ಬಿಸಿ ಮಾಡಿ ಅದರ ಮೇಲೆ ಬಿಸ್ಕೆಟ್‌ ಸ್ಟ್ಯಾಂಡ್ ಇಟ್ಟು ಮಾಡಿಟ್ಟುಕೊಂಡ ಬಿಸ್ಕೆಟ್ ಹಿಟ್ಟನ್ನು ದೊಡ್ಡ ಉರಿಯಲ್ಲಿ 10 ನಿಮಿಷ ಕಾಯಿಸಿ. ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 15 ನಿಮಿಷ ಹೊಂಬಣ್ಣ ಬರುವವರೆಗೂ ಬೇಯಿಸಿ. ಈಗ ರುಚಿಯಾದ ಕೊಬ್ಬರಿ ಬಿಸ್ಕೆಟ್ ಸವಿಯಲು ಸಿದ್ಧವಾಗಿದೆ.

4. ಉದ್ದಿನ ಬೇಳೆ ಲಡ್ಡು

ಬೇಕಾಗುವ ಸಾಮಗ್ರಿಗಳು

ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1/2 ಕಪ್
ಏಲಕ್ಕಿ ಪುಡಿ – 1/4 ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್

ಮಾಡುವ ವಿಧಾನ
Saakshatv cooking recipes prepare Uddhinabele laddu
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ. ತುಪ್ಪ ಕರಗಿದ ಬಳಿಕ ಅದಕ್ಕೆ ಉದ್ದಿನ ಬೇಳೆ ಸೇರಿಸಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಗ್ರೈಂಡ್ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿಕೊಳ್ಳಿ ಈಗ ರುಚಿಯಾದ ಉದ್ದಿನಬೇಳೆಯ ಲಡ್ಡು ಸವಿಯಲು ಸಿದ್ಧವಾಗಿದೆ.

Tags: #saakshatvcookingfood recipies
ShareTweetSendShare
Join us on:

Related Posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

by Shwetha
June 24, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಆಪ್ತರೊಂದಿಗೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram