ಅಂಗಾಂಗ ದಾನ ಮಾಡುವ ಬಗ್ಗೆ ಜಾಗೃತಿ ಅವಶ್ಯಕ : ಡಾ.ಕೆ.ಸುಧಾಕರ್
ಬೆಂಗಳೂರು : ಜನರಲ್ಲಿ ಅಂಗಾಂಗ ದಾನದ ಬಗೆಗಿನ ಮೂಡನಂಬಿಕೆ ಇನ್ನೂ ಮಾಯವಾಗಿಲ್ಲ. ಹೀಗಾಗಿ ಈ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಬಗ್ಗೆ ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯನ್ನು ಕೇಂದ್ರ ಸಚಿವರಾದ ಡಾ.ಮನ್ಸುಖ್.ಎಲ್.ಮಾಂಡವೀಯ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸುಧಾಕರ್, ಜನರಲ್ಲಿ ಅಂಗಾಂಗ ದಾನದ ಬಗೆಗಿನ ಮೂಡನಂಬಿಕೆ ಇನ್ನೂ ಮಾಯವಾಗಿಲ್ಲ. 0.3 % ಮಾತ್ರ ದೇಶದ ಜನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಅಂಗಾಂಗ ದಾನದಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಂಗಾಂಗ ಕಸಿ ಪ್ರಕ್ರಿಯೆ ಸಾಕಷ್ಟು ದುಬಾರಿ ಇದೆ. ಆದರೆ ನಮ್ಮಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ.
ಭಾರತದಲ್ಲಿ 5 ಲಕ್ಷ ಜನ ಅಂಗಾಂಗ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸತ್ತ ನಂತರ ದೇಹ ದಾನ ಮಾಡಬೇಕಾದ ಅರಿವು ಮೂಡಬೇಕಿದೆ ಎಂದು ತಿಳಿಸಿದರು.
ಇನ್ನು ಅಮೆರಿಕಾ ವಿಶ್ವಕ್ಕೆ ಅಂಗಾಗ ದಾನ ಮಾಡೋದ್ರಲ್ಲಿ ಮೊದಲ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯದಲ್ಲಿ ಅಂಗಾಂಗ ದಾನ ಮಾಡುವ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ.
ನಮ್ಮ ರಾಜ್ಯದಲ್ಲಿ ಉಚಿತ ಅಂಗಾಂಗ ಕಸಿ ಮಾಡುವ ಯೋಜನೆ ಜಾರಿಗೆ ತರಲಾಗಿದೆ. ಲಿವರ್ ಸೇರಿದಂತೆ ಯಾವುದೇ ಅಂಗಾಗ ಕಸಿ ಮಾಡಿದ್ರು ಎಸ್ ಸಿ-ಎಸ್ ಟಿ, ಒಬಿಸಿ ವರ್ಗಕ್ಕೆ ಉಚಿತವಾಗಿ ಮಾಡಲಾಗುತ್ತಿದೆ.
ಕಲಬುರಗಿ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಾದೇಶಿಕ ವಲಯಗಳಲ್ಲಿ ಅಂಗಾಂಗ ಸ್ಟೋರ್ ಮಾಡುವ ಸಂಸ್ಥೆ ಪ್ರಾರಂಭ ಮಾಡಲಾಗುತ್ತಿದೆ. ಅಂಗಾಂಗ ದಾನ ಮಾಡೋ ಬಗ್ಗೆ ಸಿಎಂ ವಿಶೇಷ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.









