ನೀಟ್ ಪರೀಕ್ಷೆ ವಿವಾದದ ಹಿನ್ನೆಲೆ ನಡೆದ ಪ್ರತಿಭಟನೆಗಳ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ‘ರಿಸರ್ವೇಶನ್ ಹಠಾವೋ ಆಂದೋಲನ’ ಎಂಬ ಅಭಿಯಾನ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮಾಹಿತಿಯ ಪ್ರಕಾರ, ‘ರಿಸರ್ವೇಶನ್ ಹಠಾವೋ ಮೂವ್ಮೆಂಟ್’ ಹೆಸರಿನ ಇನ್ಸ್ಟಾಗ್ರಾಂ ಅಭಿಯಾನವು ಕೇವಲ ಆರು ದಿನಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ದೇಶಾದ್ಯಂತ ಮೀಸಲಾತಿ ನೀತಿ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
@reservationhataomovement ಹೆಸರಿನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಆರಂಭವಾದ ಈ ಅಭಿಯಾನವನ್ನು ಯುವಜನರ ನೇತೃತ್ವದ ಪ್ರಯತ್ನವೆಂದು ವಿವರಿಸಲಾಗುತ್ತಿದೆ.
ಆದರೆ, ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಂಕಿ-ಅಂಶಗಳು ಮತ್ತು ಹೇಳಿಕೆಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಮೀಸಲಾತಿ ಕುರಿತ ಚರ್ಚೆ ದೇಶದ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಮುಂದುವರಿದಿದೆ.








