ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಐಪಿಎಲ್ 2021 | ಡೆಲ್ಲಿ ವಿರುದ್ಧ ಗೆದ್ದು ಪೈನಲ್ ಗೆ ಎಂಟ್ರಿ ಕೊಟ್ಟ ಸಿಎಸ್ ಕೆ

Mahesh M Dhandu by Mahesh M Dhandu
October 11, 2021
in IPL 2021, Newsbeat, ಐಪಿಎಲ್ 2021
IPL 2021
Share on FacebookShare on TwitterShare on WhatsappShare on Telegram

ಐಪಿಎಲ್ ಸೀಸನ್ 14ರಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಆಟ ಇಲ್ಲಿ ತನಕ ನಡೆದಿರಲಿಲ್ಲ. ಆದರೆ ಕ್ವಾಲಿಫೈಯರ್ನ ಮೊದಲ ಮ್ಯಾಚ್ನಲ್ಲಿ ಧೋನಿ ಆರ್ಭಟಿಸಿದರು. ರುತುರಾಜ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ರಾಬಿನ್ ಉತ್ತಪ್ಪ ಫಾರ್ಮ್ ಕಂಡುಕೊಂಡುಕೊಂಡ್ರು. ಚೆನ್ನೈ ಸುಲಭವಾಗಿ ಪಂದ್ಯ ಗೆದ್ದು ಫೈನಲ್ ಪ್ರವೇಶ ಪಡೆಯಿತು.

ದುಬೈನಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಶಿಖರ್ ಧವನ್ ಮತ್ತು ಪೃಥ್ವಿ ಷಾ ಸ್ಪೋಟಕ ಆರಂಭ ಒದಗಿಸಿದರು. ಪೃಥ್ವಿ ಷಾ ಬೌಂಡರಿಗಳ ಮೇಲೆ ಬೌಂಡರಿ, ಸಿಕ್ಸರ್ಗಳ ಹಿಂದೆ ಸಿಕ್ಸರ್ ಸಿಡಿಸಿದರು. ಆದರೆ ಜೋಶ್ ಹ್ಯಾಜಲ್ವುಡ್ ಶಿಖರ್ ಧವನ್ ವಿಕೆಟ್ ಪಡೆದರು. ಇವರ ಬೆನ್ನಹಿಂದಯೇ ಶ್ರೇಯಸ್ ಅಯ್ಯರ್ ಕೂಡ ಔಟಾದರು.

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

ಪೃಥ್ವಿ ಷಾ ಅಬ್ಬರಿಸುತ್ತಾ ಸಾಗಿ ಅರ್ಧಶತಕದ ಗಡಿ ಕೂಡ ದಾಟಿದರು. ಆದರೆ ಅಕ್ಸರ್ ಪಟೇಲ್ 10 ರನ್ಗಳಿಸಿ ಔಟಾದರು.34 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 60 ರನ್ಗಳಿಸಿದ್ದ ಪೃಥ್ವಿ ಜಡೇಜಾ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್ಗೆ ಕ್ಯಾಚ್ ನೀಡಿದರು. ಸಂಕಷ್ಟಕ್ಕೆ ಸಿಲುಕುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ನಾಯಕ ರಿಷಭ್ ಪಂತ್ ಮತ್ತು ಶಿಮ್ರನ್ ಹೆಟ್ಮಯರ್ ಆಸರೆಯಾದರು. ಹೆಟ್ಮಯರ್ 24 ಎಸೆತಗಳಲ್ಲಿ 37 ರನ್ ಸಿಡಿಸಿ ಔಟಾದರೆ, ಪಂತ್ 35 ಎಸೆತಗಳಲ್ಲಿ ಅಜೇಯ 51 ರನ್ಗಳಿಸಿದರು. 20 ಓವರುಗಳಲ್ಲಿ ಡೆಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ಗಳಿಸಿತ್ತು.

ದೊಡ್ಡ ಗುರಿ ಬೆನ್ನಟ್ಟ ಹೊರಟ ಚೆನ್ನೈಗೆ ಆರಂಭದಲ್ಲೇ ಆಘಾತ ಎದುರಾಯಿತು. ಫಾಫ್ ಡು ಪ್ಲೆಸಿಸ್ ಮೊದಲ ಓವರ್ನಲ್ಲೇ ಕ್ಲೀನ್ ಬೌಲ್ಡ್ ಆಗಿದ್ದರು. ಕಣಕ್ಕಿಳಿದ ರಾಬಿನ್ ಉತ್ತಪ್ಪ ಬೇರೆಯದ್ದೇ ಟಚ್ನಲ್ಲಿದ್ದರು. ರಾಬಿನ್ ಮತ್ತು ರುತುರಾಜ್ ಪವರ್ ಪ್ಲೇನಲ್ಲಿ ಡೆಲ್ಲಿ ಬೌಲರ್ಗಳ ಬೆವರಿಳಿಸಿದರು. ಈ ಜೋಡಿ 110 ರನ್ಗಳ ಜೊತೆಯಾಟ ಆಡಿ ಸಿಎಸ್ಕೆ ಗೆಲುವಿಗೆ ಬುನಾಧಿ ಹಾಕಿತ್ತು. 44 ಎಸೆತಗಳಲ್ಲಿ 63 ರನ್ಗಳಿಸದ್ದ ಉತ್ತಪ್ಪ ಕರ್ರನ್ಗೆ ವಿಕೆಟ್ ಒಪ್ಪಿಸಿದರು. ಇದು ಚೆನ್ನೈ ಕುಸಿತಕ್ಕೆ ಕಾರಣವಾಯಿತು.

IPL 2021 CSK saaksha tv

ರಾಬಿನ್ ಔಟಾದ ಬೆನ್ನಲ್ಲೇ ಭಡ್ತಿ ಪಡೆದು ಬ್ಯಾಟಿಂಗ್ಗೆ ಬಂದಿದ್ದ ಶಾರ್ದೂಲ್ ಠಾಕೂರ್ ಔಟಾದರು. ಅಂಬಟಿ ರಾಯುಡು ರನೌಟ್ ಬಲೆಯಲ್ಲಿ ಬಿದ್ದರು. ಇದರ ನಡುವೆ ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ರನ್ಬೇಟೆಯಾಡಿ ಗೆಲುವನ್ನು ಹತ್ತಿರವಾಗಿಸಿದರು. 19ನೇ ಓವರ್ನಲ್ಲಿ 50 ಎಸೆತಗಳಲ್ಲಿ 70 ರನ್ಗಳಿಸಿದ್ದ ರುತುರಾಜ್ ಔಟಾದರು. ಧೋನಿ ಬ್ಯಾಟಿಂಗ್ಗೆ ಇಳಿಸಿದರು. ಆವೇಶ್ ಖಾನ್ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಧೋನಿ ಕೊನೆಯ ಓವರ್ನಲ್ಲಿ ಗೆಲುವಿಗಾಗಿ 13 ರನ್ಗಳಿಸುವ ಅವಶ್ಯಕತೆ ಇರುವಂತೆ ನೋಡಿಕೊಂಡರು.

ಕೊನೆಯ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 13 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಮೊಯಿನ್ ಅಲಿ ಔಟಾದಾಗ ಚೆನ್ನೈಗೆ ಸಂಕಷ್ಟ ಎದುರಾಯಿತು. ಆದರೆ ನಂತರ 3 ಎಸೆತಗಳನ್ನು ಬೌಂಡರಿಗೆ ಅಟ್ಟಿದ ನಾಯಕ ಧೋನಿ ಸಿಎಸ್ಕೆ ತಂಡಕ್ಕೆ ಅಮೋಘ 4 ವಿಕೆಟ್ಗಳ ಜಯ ತಂದುಕೊಟ್ಟರು. ಚೆನ್ನೈ 19.4 ಓವರುಗಳಲ್ಲಿ ಪಂದ್ಯ ಗೆದ್ದು ಫೈನಲ್ ಪ್ರವೇಶ ಪಡೆದರೆ, ಡೆಲ್ಲಿ ಫೈನಲ್ ಆಡಲು ಕ್ವಾಲಿಫೈಯಯರ್ 2ರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಕ್ಕಿದೆ.

Tags: #Saaksha TVcskdcipl 2021
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram