ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಸಿಲ್ಕ್‌ ಸ್ಮಿತಾ ಎಂಬ ಮಾದಕ ಬೆಡಗಿಯ ಅಪ್ಪಟ ಹೃದಯವಂತಿಕೆ ಮತ್ತು ದುರಂತ ಅಂತ್ಯ

Namratha Rao by Namratha Rao
October 23, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಪಿಚ್ಚರ್‌ ಟಾಕೀಸ್:‌

ಸಿಲ್ಕ್‌ ಸ್ಮಿತಾ ಎಂಬ ಮಾದಕ ಬೆಡಗಿಯ ಅಪ್ಪಟ ಹೃದಯವಂತಿಕೆ ಮತ್ತು ದುರಂತ ಅಂತ್ಯ:

Related posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

February 4, 2026
ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

February 4, 2026

 

ಸಿಲ್ಕ್ ಸ್ಮಿತಾ ಎಂಬ ಮೋಹಕ ರೂಪಸಿ ಬದುಕಿದ್ದು ಕೇವಲ ಮೂವತ್ತೈದು ವರ್ಷಗಳಷ್ಟೇ. ಅಷ್ಟರಲ್ಲಿ ನಮ್ಮ ಮನಸು ಚಿತ್ತವನ್ನು ಕೆಣಕಿ ಕದಲಿಸುವ ಸೆಕ್ಸ್ ಬಾಂಬ್ ಎಂದು ಸಿನಿಮಾ ಮಂದಿಯಿಂದ ನಾಮಾಂಕಿತಗೊಂಡು ಜೀವಂತ ದಂತಕಥೆಯಾಗಿದ್ದ ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮೀ ನಮ್ಮ ಚಿತ್ರ ರಸಿಕರನ್ನು ಅಗಲಿ ಇಪ್ಪತ್ತೈದು ವರ್ಷ ಕಳೆದರೂ ಇನ್ನೂ ಆಕೆಯ ನೋಟ, ಮಾದಕತೆ ನಮ್ಮ ಸಿನಿ ಅಭಿಮಾನಿಗಳನ್ನು ಅಗಲಿದಂತಿಲ್ಲ. ಸಣ್ಣ ವಯಸ್ಸಿನಲ್ಲಿ ಮದುವೆಯ ಜಾಲಕ್ಕೆ ಸಿಲುಕಿ ನೋವುಂಡ ವಿಜಯಲಕ್ಷ್ಮೀ ಅಷ್ಟೇ ಬೇಗ ತೊರೆದು ಜೀವಿಸಬಹುದು ಎಂಬುದನ್ನು ಸಾಧಿಸಿ ತೋರಿಸಿ ಪಿಚ್ಚರ್ ನಿರ್ಮಾಪಕರ ತಿಜೋರಿ ತುಂಬುವ ಲಕ್ಷ್ಮೀಯಾಗಿ ಸಿಲ್ಕ್ ಇನ್ ಸ್ಕ್ರೀನ್ ಆದವಳು.

 

ನಾಯಕ ನಾಯಕಿಯರಿಗೆ ಸರಿಸಮನಾಗಿ ನಟಿಸಿದ್ದಲ್ಲದೆ ಕ್ಲಬ್ ಡ್ಯಾನ್ಸ್‌ನಲ್ಲಿ ಮಿರಿ ಮಿರಿ ಮಿಂಚಿದ ದಕ್ಷಿಣ ಭಾರತದ ಮೊದಲಿಗಳು ವಿಜಯಲಕ್ಷ್ಮಿ ಯಾನೆ ಸಿಲ್ಕ್‌ ಸ್ಮಿತಾ. ಕೆಲವು ಅತ್ಯುತ್ತಮ ಪಾತ್ರಗಳು ಆಕೆಯ ಪಾಲಿಗೆ ಸೃಷ್ಟಿಯಾಯಿತು, ಇನ್ನೂ ಕೆಲವು ಅವಳ ಮೈಮಾಟವನ್ನು ಹುಡುಕಿ ಬಂದವು. ತನ್ನ ಲೀಲಾಜಾಲ ಅಭಿನಯ, ಕಣ್ಣೋಟ, ನಯ ನಾಜೂಕುತನ ಸಿಲ್ಕ್ ಸ್ಮಿತಾಳನ್ನು ಬಹು ಎತ್ತರದ ನಟಿಯನ್ನಾಗಿಸಿ ಭಾರತೀಯ ಚಿತ್ರರಂಗ ಗುರುತಿಸಿತು. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಚಿತ್ರ ಮಂದಿರಕ್ಕೆ ಬರುವಂತೆ ಮಾಡಿದ್ದೇ ಸಿಲ್ಕ್. ಆಕೆ ತೆರೆಯ ಮೇಲೆ ಬರುವಷ್ಟೂ ಹೊತ್ತು ನೋಡುತ್ತಿದ್ದ ಹೈಕಳು ಆಮೇಲೆ ಲೋಚ ಗುಟ್ಟುತ್ತಾ ಆಚೆ ನಡೆಯುತ್ತಿದ್ದರು.

ಆಂಧ್ರ ಪ್ರದೇಶದ ದಿಂಡಲೂರು ಮಂಡಲದಲ್ಲಿ ಜನಿಸಿದ ಈ ಮೋಹಕ ತಾರೆ ಕೇವಲ ನಾಲ್ಕೈದು ತರಗತಿಯಷ್ಟೇ ಓದಲು ಸಾಧ್ಯವಾಯಿತು. ಬಡತನದ ಬೇಗೆಯಿಂದ ವಿಜಯಲಕ್ಷ್ಮೀಗೆ ಬಾಲ್ಯವಿವಾಹವಾಗಿ ಗಂಡನ ಮನೆಯ ಹಿಂಸೆ ತಡೆಯಲಾರದೇ ಊರು ಬಿಟ್ಟು ಓಡಿದವಳು ಬಂದು ನಿಂತಿದ್ದು ಮತ್ತೊಂದು ರಂಗೀನ್‌ ಜಗತ್ತಿನಲ್ಲಿ. ಪಿಚ್ಚರ್ ಹಿರೋಯಿನ್‌ಗಳಿಗೆ ಟಚಪ್ ಮಾಡುವ ಹುಡುಗಿಯಾಗಿ ಇತರರನ್ನು ನೋಡುತ್ತಲೇ ಅಭಿನಯ ಕಲಿತವಳಿಗೆ ಮೊದಲ ಸಿನಿಮಾ ಮಾಡಲು ಮಲೆಯಾಳಂ ಚಿತ್ರರಂಗದ ನಿರ್ದೇಶಕ ಆಂಟನಿ ಈಸ್ಟಮನ್ ಸ್ಮಿತಾ ಎಂದು ನಾಮಕರಣ ಮಾಡಿ “ಇನಿಯ ತೇದಿ” ಎಂಬ ಚಿತ್ರ ನಿರ್ದೇಶಿಸಿದ. ಆತನ ಪತ್ನಿ ಈಕೆಯ ಕಥೆ ಕೇಳಿ ಅನುಕಂಪ ಹರಿಸಿ ಸ್ಮಿತಾಳನ್ನು ಅತ್ಯುತ್ತಮ ಡ್ಯಾನ್ಸರ್ ಆಗಿ ರೂಪಿಸಿದಳು.

 

1979 ರಲ್ಲಿ ತೆರೆಕಂಡ ʻವಂಡಿ ಚಕ್ರʼ ಚಿತ್ರದಲ್ಲಿ ಸ್ಮಿತಾ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಳು, ಚಿತ್ರವೂ ಬಿಗ್ ಹಿಟ್ ಆಯಿತು. ಆಮೇಲೆ ಆಕೆ ತಿರುಗಿ ನೋಡಲೇ ಇಲ್ಲ. ಕಮಲ್, ರಜನೀಕಾಂತ್ ಚಿತ್ರಗಳಲ್ಲಿ ಮತ್ತು ಮಣಿರತ್ನರಂತಹ ಟಾಪ್‌ ನಿರ್ದೇಶಕರ ಚಿತ್ರಗಳಲ್ಲಿ ಸಿಲ್ಕ್ ಮಿಂಚಿದಳು. ಆಗಲೇ ಬಾಲು ಮಹೇಂದರ್‌ರ “ಮೂನ್ರಾ ಪಿರೈ” ಸೂಪರ್ ಹಿಟ್ ಆಯಿತು. ಆದರೆ ವಿಜಯಲಕ್ಷ್ಮಿ ಉರುಫ್‌ ಸಿಲ್ಕ್‌ ಸ್ಮಿತಾಳಿಗೆ ಕನ್ನಡದ ಅಆಇಈ ಕಲಿಸಿದವರು ಕನಸುಗಾರ ರವಿಚಂದ್ರನ್. ಹಳ್ಳಿ ಮೇಸ್ಟ್ರು ತಮಿಳಿನಲ್ಲಿ ಭಾಗ್ಯರಾಜ್ ಹಾಗೂ ಊರ್ವಶಿ ಅಭಿನಯದ ʻಮುಂದಾನೈ ಮುಡಿಚ್ಚುʼ ತಮಿಳು ನಾಡಿನ ಮನೆ ಮನೆ ಮಾತಾಯಿತು. ಸಿನಿಮಾದ ಪಡಿಯಚ್ಚಾದರೂ ಕನ್ನಡದಲ್ಲಿ ಹಳ್ಳಿ ಮೇಸ್ಟ್ರು ಮತ್ತು ದಿಲ್ಲಿ ಮೇಡಂ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದರು.

ಸಿಲ್ಕ್‌ ಸ್ಮಿತಾಳ ನೇರವಂತಿಕೆಯೇ ಆಕೆಯ ವೀಕ್ ನೆಸ್ ಆಗಿಹೋಯಿತು. ನಿಗದಿತ ಸಮಯಕ್ಕೆ ಶೂಟಿಂಗ್ ಹಾಜರಾಗಿ ತನ್ನ ಪಾಲಿನ ಕೆಲಸ ನಿರ್ವಹಣೆ ಮಾಡುತ್ತಿದ್ದರೂ ಬಿಗ್ ಹೀರೋ ಹಿರೋಯಿನ್‌ಗಳು ಸಮಯ ಪಾಲನೆ ಮಾಡದ ಕುರಿತು ಹಲವು ಸಲ ಆಕೆಯ ಆಕ್ಷೇಪಣೆಗೆ ಸಕಾರಣಗಳಿದ್ದವು. ತನಗೆ ಮೋಸ ಮಾಡಿದವರ ಹೆಸರುಗಳನ್ನು ತನ್ನ ನಾಯಿಗಳಿಗೆ ಇಟ್ಟು ಕರೆಯುತ್ತಿದ್ದಳು ಸಿಲ್ಕ್‌ ಸ್ಮಿತ. ಎಷ್ಟೋ ನಿರ್ದೇಶಕ ನಿರ್ಮಾಪಕರು ಆಕೆಯ ಈ ನಡೆಗೆ ಬೆದರುತ್ತಿದ್ದರು. ಬಡತನದ ಗಂಜಿ ಉಂಡು ಬೆಳೆದ ಸಿಲ್ಕ್ ತನ್ನ ಪ್ರತಿಭೆಯಿಂದ ಬೆಳ್ಳಿ ತೆರೆ ಬೆಳಗಿ ತಾರೆಯಾದ ಮೇಲೆ ತಾನು ಮಾಡುವ ಊಟಕ್ಕೆ ಇತರರಿಗೆ ಮಾದರಿಯಾದ ರೀತಿಯಲ್ಲಿ ಬಾಯಲ್ಲಿ ನೀರು ಬರಿಸುತ್ತಿದ್ದಳು. ಒಂದು ದೊಡ್ಡ ಡೈನಿಂಗ್ ಟೇಬಲ್ ಮುಂದೆ ಖುದ್ದು ಐಟಂ ಎಂದು ಕರೆಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಊಟಕ್ಕೆ ಕುಳಿತರೇ ಹತ್ತಾರು ಭಕ್ಷ್ಯ ಭೋಜನಗಳ ಐಟಂಗಳು ಇರಲೇಬೇಕಿತ್ತು. ಆಕೆಗೆ ಬೇಕಾದ ಏಸ್ ಕ್ರೀಂ, ಜ್ಯೂಸ್ ಟೇಬಲ್ ತುಂಬಾ ಹರಡಿರುತ್ತಿದ್ದವು. ಆಕೆ ತನಗೆ ಬೇಕಾದಷ್ಟನ್ನೇ ತಿಂದು ಯಾವುದನ್ನು ಎಂಜಲು ಮಾಡದೇ ತನ್ನ ಯೋಗ ಕ್ಷೇಮ ನೋಡಿಕೊಳ್ಳುವವರಿಗೆ ಆ ಆಹಾರ ಮೀಸಲಾಗಿಟ್ಟು ತಿನ್ನಿಸುತ್ತಿದ್ದಳು ಸ್ಮಿತಾ, ಸರಿಯಾಗಿ ಹೇಳಬೇಕೆಂದರೆ ಅವಳು ಅಷ್ಟು ಫುಡ್ ಆರ್ಡರ್ ಮಾಡುತ್ತಿದ್ದದೇ ತನ್ನನು ನಂಬಿದವರಿಗೊಸ್ಕರ.

ಜೀವನದಲ್ಲಿ ತುಂಬಾ ನೊಂದು ಬೆಂದು ಹೋಗಿದ್ದ ಸಿಲ್ಕ್ ಸ್ಮಿತಾ ನೇರ ನಡೆ ನುಡಿಯಿದ್ದರೂ ಮಗುವಿನಂತೆ ಮನಸು ಹೊಂದಿದ್ದವಳು. ಆಕೆಯನ್ನು ಹಲವರು ಉಪಯೋಗಿಸಿಕೊಂಡರೆ ಮತ್ತೆ ಕೆಲವರು ದುರುಪಯೋಗಿಸಿಕೊಂಡರು. ಕೊನೆಗವಳು ಕುಡಿತದ ನಿಶೆಯಲ್ಲಿ ಬದುಕತೊಡಗಿದಳು. ತಾನು ನಂಬಿದವರಿಂದ ಮೋಸ ಹೋಗಿದ್ದಲ್ಲದೆ ನಿಂದನೆಗೂ ಒಳಗಾಗಿ ನೊಂದು ಹೋದಳು. ಆ ಒಂದು ದಿನ ಲೆಕ್ಕಕ್ಕೆ ಸಿಕ್ಕದಷ್ಟು ಕುಡಿದು ನೇಣಿಗೆ ಶರಣಾದಳೆಂದು ಆಕೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ಸಾರಿ ಹೇಳಿತು.

 

ಸಿಲ್ಕ್ ಸಾಯುವ ಮೊದಲು ತನ್ನ ಆತ್ಮೀಯ ಗೆಳತಿ ಮತ್ತೊಬ್ಬ ಡ್ಯಾನ್ಸರ್ ಅನುರಾಧಳಿಗೆ ಫೋನ್ ಮಾಡಿ ಗದ್ಗದಿತಳಾಗಿದ್ದಳು. ಅನುರಾಧಾ ತನ್ನ ಮಗಳನ್ನು ಶಾಲೆಗೆ ಬಿಟ್ಟು ಗೆಳತಿ ಸ್ಮಿತಾಳನ್ನು ಬದುಕಿಸಿಕೊಳ್ಳಲು ಓಡೋಡಿ ಬಂದಳು. ಬಿಕ್ಕಿ ಬಿಕ್ಕಿ ಅಳುತ್ತಾ ನೇತಾಡುತ್ತಿದ್ದ ಗೆಳತಿಯ ಪಾದಕ್ಕೆ ಮುತ್ತಿಕ್ಕಿದಳು. ಸೆಕ್ಸ್ ಬಾಂಬ್ ಎಂದು ಮಜಾ ತೆಗೆದುಕೊಂಡ ಸಿನಿಮಾರಂಗದ ಮಾಂಸದ ಮುದ್ದೆಯೊಂದು ತನ್ನ ಕೊನೆಯ ಉಸಿರೆಳೆದಿತ್ತು. ಸಿಲ್ಕ್ ಸ್ಮಿತಾ ನಮ್ಮನ್ನಗಲಿ ಇಪ್ಪತ್ತೈದು ವರ್ಷಗಳ ಮೇಲಾದರೂ ಅವಳ ನೆನಪು ಮಾಸದೇ ಇಂದಿಗೂ ಉಳಿದಿದೆ.

 

-ವೈ.ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು, ಬರಹಗಾರರು. ಬೆಂಗಳೂರು

Tags: #saakshatvboigraphyBollywoodfilmkollyoodlife storyLifestyleSandalwoodsilksmithaspecial articletollyowood
ShareTweetSendShare
Join us on:

Related Posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

by Shwetha
February 4, 2026
0

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಗುತ್ತಿಗೆದಾರರ ಸಂಘವೇ ಈಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಸಂಘದೊಳಗೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ...

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

by Shwetha
February 4, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ...

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

by Shwetha
February 4, 2026
0

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ತುರ್ತು ಎಚ್ಚರಿಕೆಯೊಂದನ್ನು ರವಾನಿಸಿದೆ. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು...

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram