ಕೃಷಿ ಸಚಿವಾಲಯದ ರಾಯಭಾರಿ ನಟ ದರ್ಶನ್ ‘ರೈತರೊಂದಿಗೆ ಒಂದು ದಿನ’ ವನ್ನ ಕಳೆಯಲಿದ್ದಾರೆ.
ಕೃಷಿ ಸಚಿವ ಬಿ ಸಿ ಪಾಟಿಲ್ ಅವರ ತವರು ಕ್ಷೇತ್ರ ಹಿರೇಕೆರೂರು ಗ್ರಾಮದಲ್ಲಿ ಕೃಷಿ ಇಲಾಖೆಯ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಲಿದ್ದಾರೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೇಮ, ಪ್ರಕೃತಿ ಕೃಷಿ ಬಗ್ಗೆ ಅವರಿಗಿರುವ ಆಸಕ್ತಿ ನಮಗೆಲ್ಲ ತಿಳಿದಿರುವಂತದ್ದು. ಇದೇ ಕಾರಣಗಳಿಗಾಗಿ ರಾಜ್ಯ ಸರಕಾರ ಅವರನ್ನ ಕೃಷಿ ಇಲಾಖೆಯ ಅಧಿಕೃತ ರಾಯಭಾರಿಯನ್ನಾಗಿ ಮಾಡಿದೆ. ದರ್ಶನ್ ಸಹ ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
ರಾಜ್ಯ ಕೃಷಿ ಇಲಾಖೆಯು ‘ರೈತರೊಟ್ಟಿಗೆ ಒಂದು ದಿನ’ ಹೆಸರಿನ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದ ಅಂಗವಾಗಿ ನಟ ದರ್ಶನ್ ಒಂದು ದಿನ ರೈತರೊಟ್ಟಿಗೆ ಕಳೆಯಲಿದ್ದಾರೆ. ನವೆಂಬರ್ 14 ರಂದು ಹಿರೇಕೆರೂರಿನ ರೈತರೊಟ್ಟಿಗೆ ಒಂದು ದಿನವನ್ನು ಕಳೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಜೊತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ಇರಲಿದ್ದಾರೆ.








