ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ‘ಶೂನ್ಯ ಸಂಪಾದನೆ’ : ಕಾಂಗ್ರೆಸ್ Congress Saaksha tv
ಬೆಂಗಳೂರು : ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ‘ಶೂನ್ಯ ಸಂಪಾದನೆ’ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಘಟಕ.. ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ‘ಶೂನ್ಯ ಸಂಪಾದನೆ’ ಮಾಡಿದೆ. ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ?21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು ‘ಡಕೋಟಾ ಸರ್ಕಾರ’ ಎನ್ನದೆ ಇನ್ನೇನು ಹೇಳಬೇಕು!?
ಪೆಟ್ರೋಲ್-ಡೀಸೆಲ್, ಎಲ್ಪಿಜಿ ನಿರಂತರ ಬೆಲೆ ಏರಿಕೆ ಪರಿಣಾಮ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಬೆಲೆ ಏರಿಕೆಯ ಪ್ರಹಾರ ಜನರನ್ನ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳಿಗೆ ಕನಿಷ್ಟ ಬದ್ಧತೆ ಇದ್ದರೆ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತ ಗೊಳಿಸಿ, ಬೆಲೆಯೇರಿಕೆಗೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದೆ.









