ನ್ಯೂಜಿಲೆಂಡ್ ವಿರುದ್ಧದ ಸರಣಿಗೆ `ಯಂಗ್’ ಇಂಡಿಯಾ ಆಯ್ಕೆ ಸಾಧ್ಯತೆ..! India T20
ನವದೆಹಲಿ : ಸದ್ಯ ಟಿ20 ವಿಶ್ವಕಪ್ ನಲ್ಲಿ ಸತತವಾಗಿ ಸೋಲುಂಡಿರುವ ಟೀಂ ಇಂಡಿಯಾ ನವೆಂಬರ್ 17 ರಿಂದ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ.
ಈ ಸರಣಿಗೆ ಯಂಗ್ ಇಂಡಿಯಾವನ್ನು ಕಟ್ಟಲು ಆಯ್ಕೆ ಸಮಿತಿ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಟಿ 20 ಸರಣಿಗಾಗಿ ಐಪಿಎಲ್ ಸ್ಟಾರ್ ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್ ಗೆ ಮಣೆ ಹಾಕುವ ಸಾಧ್ಯತೆಗಳಿವೆ.
ಹೌದು..! ರುತುರಾಜ್ ಗಾಯಕ್ವಾಡ್ ಐಪಿಎಲ್ ನಲ್ಲಿ ಚೆನ್ನೈ ಪರ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ.
16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 136 ಸ್ಟ್ರೈಕ್ ರೇಟ್ ಮತ್ತು 45ರ ಸರಾಸರಿಯಲ್ಲಿ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
ಇವರಲ್ಲದೇ ಕೆಕೆಆರ್ ತಂಡದ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದಾರೆ.
ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿ ಈ ಯುವ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಇವರಲ್ಲದೇ ಮಯಾಂಕ್ ಅಗಲ್ ವಾಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹರ್ ಕೂಡ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.









