ನಿನ್ನೆಯ NCB ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಕೊರೊನಾ ಕಾರಣ ಕೊಟ್ಟ ಶಾರುಖ್ ಪುತ್ರ..?
ಮುಂಬೈ : ಮುಂಬೈನ ಐಶಾರಾಮಿ ಕ್ರ್ಯೂಸ್ ನಲ್ಲಿ ಡ್ರಗ್ಸ್ ಪಾರ್ಟಿ ವೇಳೆ ಸಿಕ್ಕಿಬಿದ್ದಿದ್ದ ಬಾಲಿವುಡ್ ಬಾದ್ ಷಾ ಶಾರುಖ್ ಪುತ್ರ ಆರ್ಯನ್ ಖಾನ್ ಅನೇಕ ದಿನಗಳ ಕಾಲ ಜೈಲಿನಲ್ಲಿದ್ದು ಕಡೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ನಡುವೆ ಪ್ರಜಕರಣ ತನಿಖಾಧಿಕಾರಿ ಸಮೀರ್ ವಾಖಂಡೆ ಅವರ ಮೇಲೂ ಅನೇಕ ಆರೋಪಗಳನ್ನ ಹೊರಿಸಲಾಗಿರುವ ಕಾರಣಕ್ಕೆ ತನಿಖಾಧಿಕಾರಿಯನ್ನ ಬದಲಾಯಿಸಲಾಗಿದೆ.
ಅಷ್ಟೇ ಅಲ್ಲ ನಿನ್ನೆಯ NCB ವಿಚಾರಣೆಯಿಂದಲೂ ಆರ್ಯನ್ ಖಾನ್ ತಪ್ಪಿಸಿಕೊಂಡಿದ್ದಾರೆ. NCB ಕರೆದಾಗ ಆರ್ಯನ್ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿತ್ತು. ಆದರೆ ಈಗ ಆರ್ಯನ್ ಖಾನ್ ಇಂದು ವಿಚಾರಣೆಗೆ ಹಾಜರಾಗಿಲ್ಲ. ಇದು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ.
ವಿಚಾರಣೆಗೆ ಹಾಜರಾಗದೇ ಇದ್ದದ್ದಕ್ಕೆ ಆರ್ಯನ್ ಖಾನ್ NCB ಅಧಿಕಾರಿಗಳಿಗೆ ಕಾರಣವನ್ನೂ ನೀಡಿದ್ದಾರೆ ಎನ್ನಲಾಗಿದೆ. ಡಿಡಿಜಿ NCB ಸಂಜಯ್ ಸಿಂಗ್ ಅವರು ಆರ್ಯನ್ ಖಾನ್‍ಗೆ ಬುಲಾವ್ ನೀಡಿದ್ದರು. ಆದರೆ ಆರ್ಯನ್‍ಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಹೌದು… ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ಅವರು ಕೋರಿದ್ದರು ಎನ್ನಲಾಗಿದೆ. ಇದಕ್ಕೆ NCB ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಗಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿ ಸಮೀರ್ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ ನಂತರ ಕೆಲ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸಲು ವಿಶೇಷ ತಂಡವನ್ನ ರಚಿಸಿದೆ. ಅಲ್ಲದೇ ಪ್ರಕರಣದ ತನಿಖೆಯಿಂದ ಸಮೀರ್ ವಾಂಖೆಡೆಯನ್ನು ಹೊರಗಿಡಲಾಗಿದೆ. ಈ ಪ್ರಕರಣದ ಬಗ್ಗೆ ಕೇಂದ್ರದ ಉನ್ನತ ತಂಡ ತನಿಖೆ ನಡೆಸಲು ಆರಂಭಿಸಿದೆ.