ಅಸ್ಸಾಂ ರಾಜ್ಯದ ಕರೀಮ್ಗಂಜ್ ಜಿಲ್ಲೆಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕರೀಂಗಂಜ್ ಜಿಲ್ಲೆಯ ಬೈತಖಾಲ್ ಪ್ರದೇಶ(Baithakhal area)ದಲ್ಲಿ ಆಟೋ ಮತ್ತು ಟ್ರಕ್ ಮುಖಾಮುಖಿಯಾಗಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿದೆ. ಪ್ರಾಣ ಕಳೆದುಕೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಸೇರಿದ್ದಾರೆ. ಮೃತಪಟ್ಟವರು ಛಟ್ ಪೂಜೆಯನ್ನ ಸಲ್ಲಿಸಿ ಮನೆಗೆ ಹಿಂತಿರುಗುವಾಗ ಎದುರಿಗೆ ಬರುತ್ತಿರುವ ಟ್ರಕ್ಕು ಇವರು ಪ್ರಯಾಣಿಸುತ್ತಿರುವ ಆಟೋಗೆ ಢಿಕ್ಕಿಯಾಗಿದೆ ಎಂದು ಸ್ಥಳಿಯರು ವಿವರಿಸಿದ್ದಾರೆ . ಅಪಘಾತ ನಡೆದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಮೃತಪಟ್ಟವರ ವಿವರಗಳನ್ನ ಇನ್ನಷ್ಟೆ ಸಂಗ್ರಹಿಸಬೇಕಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಂತಾಪ ಸೂಚಿಸಿದ್ದು, ಟ್ರಕ್ ಚಾಲಕನನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
“ಇಂದು (ಗುರುವಾರ) ಬೆಳಿಗ್ಗೆ ಪಥರಖಂಡಿಯ ಬೈತಖಾಲ್ನಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾದ ಒಂಬತ್ತು ಜನರಿಗೆ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿದ್ದಾರೆ. ಅಸ್ಸಾಂ ಪೊಲೀಸರು ಆಟೋಗೆ ಡಿಕ್ಕಿ ಹೊಡೆದ ನಂತರ ಪರಾರಿಯಾಗಿರುವ ಟ್ರಕ್ನ ಚಾಲಕನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಎಂದು ಅಸ್ಸಾಂ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.










