ಕೋವಿಡ್ ತಗ್ಗಿದ ಬೆನ್ನಲ್ಲೇ ಶಿರಡಿಗೆ ಭಕ್ತರ ಪ್ರವೇಶಕ್ಕೆ ಅನುಮತಿ – ಆದ್ರೆ ಷರತ್ತು ಅನ್ವಯ..!
ಮುಂಬೈ : ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಮಾಣದಲ್ಲಿ ಇಳಿಕೆಯಾದ ಬೆನ್ನಲ್ಲೇ ಥಿಯೇಟರ್ ಗಳು ತೆರೆಯುವುದು ಸೇರಿದಂತೆ ಹಲವು ನಿರ್ಬಂಧನಗಳನ್ನ ಸಡಿಲಿಕೆ ಮಾಡಲಾಗಿದೆ.. ಈ ನಡುವೆ ವಿಶ್ವವಿಖ್ಯಾತ ಶಿರಡಿ ಸಾಯಿಬಾಬಾ ಮಂದಿರಕ್ಕೂ 10 ಸಾವಿರ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.. ಆದ್ರೆ ಪ್ರತಿ ದಿನ 10 ಸಾವಿರ ಭಕ್ತರ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ..
ಅಹ್ಮದ್ ನಗರ ಜಿಲ್ಲಾಡಳಿತ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಕ್ಟೋಬರ್ 6ರಂದು ಹೊರಡಿಸಲಾದ ಆದೇಶದಂತೆ ಆನ್ಲೈನ್ ಪಾಸ್ ಹೊಂದಿದ 15 ಸಾವಿರ ಮಂದಿ ಪ್ರತಿದಿನ ದರ್ಶನ ಪಡೆಯಬಹುದಾಗಿದೆ. ಆ ಆದೇಶ ಮುಂದುವರಿಯಲಿದ್ದು ಇದೀಗ ಆಫ್ಲೈನ್ ಪಾಸ್ ಹೊಂದಿದ 10 ಸಾವಿರ ಮಂದಿಗೂ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ ಪ್ರತಿದಿನ 25 ಸಾವಿರ ಭಕ್ತರು ದರ್ಶನ ಪಡೆಯುವುದು ಸಾಧ್ಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.








