ಬಾಪ್ರೇ..! ಈ ಪೇಂಟಿಂಗ್ ಬೆಲೆ 260 ಕೋಟಿ ರೂ..

1 min read
frida-kahlo saaksha tv

ಬಾಪ್ರೇ..! ಈ ಪೇಂಟಿಂಗ್ ಬೆಲೆ 260 ಕೋಟಿ ರೂ..

ನ್ಯೂಯಾರ್ಕ್ : ಮೆಕ್ಸಿಕನ್ ಐಕಾನಿಕ್ ಕಲಾವಿದೆ ಫ್ರಿಡಾ ಕಹ್ಲೋ ಅವರ ಅಪರೂಪದ ಪೇಂಟಿಂಗ್ ನ್ಯೂಯಾರ್ಕ್ ಹರಾಜಿನಲ್ಲಿ ಸುಮಾರು 35 ಮಿಲಿಯನ್ ಡಾಲರ್ (ಅಂದಾಜು 260 ಕೋಟಿ ರೂ.)ಗೆ ಮಾರಾಟವಾಗಿದೆ.

ಈ ಚಿತ್ರದ ಮಹತ್ವದ ವಿಷಯವೆಂದರೆ, ಕಲಾವಿದೆ ಫ್ರಿಡಾ ತನ್ನನ್ನು ಚಿತ್ರಿಸಿರುವುದು ಮಾತ್ರವಲ್ಲದೆ ತನ್ನ ಪತಿ ಡಿಯಾಗೋ ರಿವೆರಾ ಅವರ ಮೂಖ ಪೇಂಟಿಂಗ್ ನ ಹಣೆಯ ಮೇಲೆ ಪ್ರತಿಫಲಿಸುವಂತೆ ಮಾಡಿದ್ದಾರೆ.

frida-kahlo  saaksha tv

ಈ ಪೇಂಟಿಂಗ್ ನಲ್ಲಿ ವಿಲಕ್ಷಣವಾದ ಹುಬ್ಬಗಳಿಂದ ಕಪ್ಪು ಕಣ್ಣುಗಳ ಮೇಲೆ ಕಣ್ಣೀರು ಬರುವಂತೆ ಬಿಡಿಸಲಾಗಿದೆ. ಇದಲ್ಲದೆ ಫ್ರಿಡಾ ತನ್ನ ಪತಿಯ ಹೆಸರಲ್ಲಿ ಈ ಪೇಟಿಂಗ್ ಅನ್ನು ಚಿತ್ರಿಸಿದ್ದಾರೆ

ಕೆಲವು ಕಲಾವಿದರ ಪ್ರಕಾರ.. ಫ್ರಿಡಾ ಪತಿ ಡಿಯಾಗೋ ರಿವೆರಾ ಮೆಕ್ಸಿಕನ್ ನಟಿಗೆ ಹತ್ತಿರವಾದ್ದರಿಂದಲೇ
ತನ್ನ ಗಂಡನ ಮುಖವನ್ನು ಹಣೆಯ ಮೇಲೆ ಮೂರನೇ ಕಣ್ಣು ಎನ್ನುವ ರೀತಿ ಚಿತ್ರಿಸಿದ್ದಾರೆ ಎಂದಿದ್ದಾರೆ . ಇದಲ್ಲದೆ, ಈ ಚಿತ್ರವು ಅವಳ ಆಲೋಚನೆಗಳನ್ನು ಅವನು ಎಷ್ಟು ಹಿಂಸಿಸಿದ್ದಾನೆ ಎಂಬುದನ್ನು ಸಹ ಸೂಚಿಸುತ್ತದೆ ಎಂದು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd