‘ಸಿಧು ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆಯೇ : ಗೌತಮ್
ನವದೆಹಲಿ : ಸಿಧು ಅವರಿಂದ ಇದಕ್ಕಿಂತ ನಾಚಿಕೆಗೇಡಿನ ಹೇಳಿಕೆ ಮತ್ತೊಂದಿರಲಾರದು ಎಂದು ನವಜೋತ್ ಸಿಧು ವಿರುದ್ಧ ಸಂಸದ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.
ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಹೋದರ ಎಂದಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ನೀವು ಮೊದಲು ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ.
ಆ ಬಳಿಕ ಉಗ್ರರ ದೇಶದ ಮುಖ್ಯಸ್ಥನನ್ನು ನಿಮ್ಮ ಸಹೋದರನೆಂದು ಕರೆಯಿರಿ ಎಂದು ಗರಂ ಆಗಿದ್ದಾರೆ.
ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಗೌತಮ್, ಸಿಧು ಅವರ ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಸಿಧು ಅವರಿಂದ ಇದಕ್ಕಿಂತ ನಾಚಿಕೆಗೇಡಿನ ಹೇಳಿಕೆ ಮತ್ತೊಂದಿರಲಾರದು ಎಂದು ಕಿಡಿಕಾರಿದ್ದಾರೆ.
ಸಿಧು ಹೇಳಿದ್ದಿಷ್ಟು..
ಶನಿವಾರ ಸಿಧು ಗುರುದ್ವಾರದ ತರ್ಕಾರ್ ಪು ಸಾಹಿಬ್ ಗೆ ಭೇಟಿ ನೀಡಿದ್ದರು.
ಈ ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಡಾ ಭಾಯ್ ಎಂದಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.









