ನಾನಂತು ಪ್ರತಿ ಬಾರಿ ಅಪ್ಪುಗೆ ಗಾಳ ಹಾಕುತ್ತಿದ್ದೆ : ಡಿ.ಕೆ.ಶಿವಕುಮಾರ್ puneeth-rajkumar saaksha tv
ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಹಲವು ಬಾರಿ ಪುನೀತ್ ರಾಜಕುಮಾರ್ ಅವರಿಗೆ ಗಾಳ ಹಾಕಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜಕೀಯಕ್ಕೆ ಬರುವಂತೆ ಅಪ್ಪುಗೆ ಮೋದಿ ಆಹ್ವಾನಿಸಿದರ ಬಗ್ಗೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ಪುನೀತ್ ರಾಜಕುಮಾರ್ ಅವರು ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿದ್ದಾರೆ.
ಸಾಕಷ್ಟು ಬಾರಿ ನಾನು ಮತ್ತು ಸಿದ್ದರಾಮಯ್ಯ ಪುನೀತ್ ಅವರನ್ನು ಕರೆದು ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನಿಸಿದ್ದೇವು.
ನಾನಂತು ಅನೇಕ ಬಾರಿ ಗಾಳ ಹಾಕಿದ್ದೇನೆ. ಆಗ ಪುನೀತ್ ಇಲ್ಲ ಸಾರ್.. ನಾನು ನಮ್ಮ ತಂದೆ ಹಾದಿಯಲ್ಲಿ ನಡೆಯುವೆ ಎನ್ನುತ್ತಿದ್ದರು ಎಂದು ಹೇಳಿದ್ದಾಗಿ ಡಿಕೆಶಿ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ರಾಷ್ಟ್ರೀಯ ನಾಯಕರು ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಆಹ್ವಾನಿಸಿದ್ದರಂತೆ.









