ಕತ್ರಿನಾ – ವಿಕ್ಕಿ ಮದುವೆಗೆ ಬರೋರಿಗೆ ಈ ಕಂಡೀಶನ್ ಅಪ್ಲೈ..!
ನವದೆಹಲಿ: ಬಾಲಿವುಡ್ ನ ಸ್ಟಾರ್ ನಟಿ ಕತ್ರೀನಾ ಕೈಫ್ ಹಾಗೂ ಆಕೆಯ ಬಾಯ್ ಫ್ರೆಂಡ್ ವಿಕ್ಕಿ ಕೌಶಾಲ್ ಇದೇ ಡಿಸೆಂಬರ್ ನಲ್ಲಿ ವೈಹಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.. ಈ ನಡುವೆ ಬಿ ಟೌನ್ ನಿಂದ ಆಶ್ಚರ್ಯಕರ ಮಾಹಿತಿ ಒಂದು ಹೊರಬಿದ್ದಿದೆ.. ಮದುವೆಗೆ ಬರೋ ಅತಿಥಿಗಳಿಗೆ ಒಂದು ಕಂಡೀಶನ್ ವಿಧಿಸಲಾಗಿದೆ..
ಅದೇನೆಂದ್ರೆ ವಿಕ್ಕಿ ಕೌಶಲ್ ಅವರ ವಿವಾಹ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಡಿ.12ರಿಂದ 17ನೇ ತಾರೀಖಿನ ಅವಧಿಯಲ್ಲಿ ರಾಜಸ್ಥಾನದ ಹೋಟೆಲೊಂದರಲ್ಲಿ ಕತ್ರಿನಾ ಹಾಗೂ ವಿಕ್ಕಿ ವಿವಾಹ ನಡೆಯಲಿದೆ. ತಮ್ಮ ವಿವಾಹದ ಸಂದರ್ಭದಲ್ಲಿ ಅತಿಥಿಗಳು ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು ಎಂದು ಸಮಾರಂಭ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ವಿವಾಹದ ಫೋಟೊ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಕ್ಕೆ ಅವಕಾಶ ನೀಡಬಾರದು. ವಿವಾಹ ಸಮಾರಂಭದ ಸ್ಥಳದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ 10 ಮಂದಿಯ ತಂಡವೊಂದು ಹೋಟೆಲ್‌ಗೆ ತೆರಳಿ ವಿವಾಹ ಸಮಾರಂಭದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಂದ್ಹಾಗೆ ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ಜಾನ್ಸನ್ ಹಾಗೂ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಜೋಡಿ ವಿವಾಹ ಸಂದರ್ಭದಲ್ಲೂ ಅತಿಥಿಗಳು ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಲಾಗಿತ್ತು.








