ಬೆಂಗಳೂರಿನ ಕಾಲೇಜೊಂದರಲ್ಲಿ ಕೊರೊನಾ ಸ್ಫೋಟ Bangalore saaksha tv
ಬೆಂಗಳೂರು : ಕೆಲದಿನಗಳಿಂದ ಸುಮ್ಮನಿದ್ದ ಕೊರೊನಾ ಸೋಂಕು ಮತ್ತೆ ತನ್ನ ಇರುವಿಕೆಯನ್ನು ತೋರಿಸಲಾರಂಭಿಸಿದೆ.
ಬೆಂಗಳೂರಿನ ಶಾಲಾ-ಕಾಲೇಜಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಪತ್ತೆಯಾಗುತ್ತಿವೆ.
ನಗರದ ಆನೇಕಲ್ ನ ಮರಸೂರಿನಲ್ಲಿ ಇರುವ ಸ್ಫೂರ್ತಿ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ.
ಇಲ್ಲಿ ಗಮನಿಸಬೇಕಾದ ವಿಚಾರ ಏನಂದ್ರೆ ಪಾಸಿಟಿವ್ ಆದ ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಇವರು ಮೊದಲ ವರ್ಷದ ಬಿಎಸ್ ಸಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ 12 ವಿದ್ಯಾರ್ಥಿಗಳನ್ನ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.









