ಪೆಟ್ರೋಲ್ – ಡೀಸೆಲ್ ಬದಲು ಕೊಳಚೆ ನೀರಲ್ಲಿ ವಾಹನಗಳ ಓಡಿಸುವ ಯೋಜನೆ ಶೀಘ್ರದಲ್ಲೇ..!
ಒಂದೆಡೆ ದೇಶದಲ್ಲಿ ಅಗತ್ಯ ವಸ್ತುಗಳು , ಪೆಟ್ರೋಲ್ , ಡೀಸೆಲ್ ಬೆಲೆ ಗಗನಕ್ಕೇರಿದೆ.. ಮತ್ತೊಂದೆಡೆ ದೇಶದಲ್ಲಿ ಮಾಲಿನ್ಯವೂ ಹೆಚ್ಚಿದೆ.. ಆದ್ರೆ ಕಸದಿಂದ ರಸ ಅನ್ನುವಂತೆ , ಕೊಳಚೆ ನೀರಿನ ಉಪಯೋಗದಿಂದ ವಾಹನ ಚಲಾವಣೆ ಟೆಕ್ನಾಲಾಜಿ ಅಳಡಿಕೆಗೆ ಸರ್ಕಾರ ಯೋಜನೆ ರೂಪಿಸಿಕೊಳ್ತಿದೆ..
ವಿವಿಧ ನಗರಗಳಲ್ಲಿ ಗ್ರೀನ್ ಹೈಡ್ರೋಜನ್ ಬಳಸಿ ಕಾರು, ಟ್ರಕ್ ಮತ್ತು ಬಸ್ಗಳನ್ನು ಓಡಿಸುವ ಯೋಜನೆ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದಾಗಿ ವರದಿಯಾಗಿದೆ.. 6ನೇ ರಾಷ್ಟ್ರೀಯ ಹಣಕಾಸು ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ ನಗರಗಳ ಕೊಳಚೆ ನೀರು ಮತ್ತು ಘನ ತ್ಯಾಜ್ಯದಿಂದ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಬಳಸಿ ಬಸ್, ಕಾರು ಮತ್ತು ಟ್ರಕ್ಗಳನ್ನು ಓಡಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಕಸಕ್ಕೆ ಮೌಲ್ಯ ತಂದುಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ಫರಿದಾಬಾದ್ ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸುವ ಹಸಿರು ಹೈಡ್ರೋಜನ್ ನಿಂದ ಚಲಿಸುವ ಪೈಲಟ್ ಪ್ರಾಜೆಕ್ಟ್ ಕಾರನ್ನು ಖರೀದಿಸಿದ್ದೇನೆ. ಈ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ನಗರದಲ್ಲಿ ಓಡಿಸುತ್ತೇನೆ ಎಂದಿದ್ದಾರೆ.








