ನಾನು ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ pooja hegde saaksha tv
ಭಾರತೀಯ ಸಿನಿಮಾ ಇಂಡಸ್ಟ್ರೀಗೆ ಕರುನಾಡು ಸಾಕಷ್ಟು ಕಲಾವಿದರನ್ನ ನೀಡಿದೆ. ಅದು ಸೌತ್ ಸಿನಿಮಾ ಆಗಿರಲಿ ಅಥವಾ ಬಾಲಿವುಡ್ ಆಗಿರಲಿ.
ಅಲ್ಲಿ ಕರ್ನಾಟಕದ ಕಲಾವಿದರು ಇದ್ದೇ ಇರುತ್ತಾರೆ. ಮೂಲತಃ ಕರ್ನಾಟಕದವರಲ್ಲದಿದ್ದರೂ ಅದೆಷ್ಟೋ ನಟ, ನಟಿಯರು ತಮ್ಮ ವೃತ್ತಿ ಜೀವನವನ್ನು ಚಂದನವನದಿಂದ ಆರಂಭಿಸಿದ್ದಾರೆ.
ಹಾಗೇ ಕರ್ನಾಟಕದಿಂದ ಸಿನಿಮಾ ಜರ್ನಿಯನ್ನು ಆರಂಭಿಸಿದ ಸಾಕಷ್ಟು ಮಂದಿ ಇದೀಗ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಇನ್ನೂ ಕೆಲವರು ಮೂಲತಃ ಕರ್ನಾಟಕದವರೇ ಆಗಿದ್ದರೂ ಅವರು ಬೇರೆ ಭಾಷೆಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ.
ಆದ್ರೆ ಹಾಗೇ ಬೇರೆ ಭಾಷೆಯಲ್ಲಿ ಮಿಂಚುವ ತಾರೆಯರು ನಮ್ಮ ಭಾಷೆ, ನೆಲದ ಬಗ್ಗೆ ತುಟಿ ಬಿಚ್ಚುವುದೇ ಇಲ್ಲ. ಕನಿಷ್ಠ IAM From Karnataka ಅಂತ ಹೇಳಿಕೊಳ್ಳುವ ಗೋಜಿಗೂ ಹೋಗೋದಿಲ್ಲ.
ಆದ್ರೆ ಟಾಲಿವುಡ್ ನ ಬುಟ್ಟ ಬೊಮ್ಮ ಪೂಜಾ ಹೆಗ್ಡೆ ಕಾರ್ಯಕ್ರಮ ವೊಂದರಲ್ಲಿ “ನಾನು ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ” ಅಂತ ಹೇಳಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಹೌದು..! ಬರೋಬ್ಬರಿ ಆರೂವರೆ ದಶಕದ ಬಳಿಕ ಬೆಂಗಳೂರಿನಲ್ಲಿ ಪ್ರತಿಷ್ಟಿತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ.
ಈ ಕಾರ್ಯಕ್ರಮದ ರಾಯಭಾರಿಯಾಗಿ ಸೌತ್ ಬ್ಯೂಟಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕರ್ನಾಟಕದ ಜೊತೆಗಿನ ನಂಟಿನ ಬಗ್ಗೆ ಮಾತಾಡಿದ್ದಾರೆ.
ಈಗ ಎಲ್ಲರೂ ನನ್ನನ್ನು ಪೂಜಾ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಪುಟ್ಟಬೊಮ್ಮ ಎಂದು ಕರೆಯುತ್ತಿದ್ದಾರೆ.
ನಾನು ಈ ಫಿಲಂ ಫೇರ್‌ನಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಮಂಗಳೂರಿನವಳು. ಆದರೆ ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ.
ನಾನು ಕರ್ನಾಟಕದವಳು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ.” ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ಪೂಜಾ ಹೆಗ್ಡೆ ಅವರ ಈ ಮಾತು ಇದೀಗ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.









