ADVERTISEMENT
Thursday, July 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಬ್ರೇಕ್ ಫಾಸ್ಟ್ / ಲಂಚ್ ಗೆ ಈ 12 ರೈಸ್ ಬಾಸ್ , ವೆಜ್ ಬಿರಿಯಾನಿ ರೆಸಿಪಿಗಳನ್ನ ಟ್ರೈ ಮಾಡಿ ನೋಡಿ..!

Namratha Rao by Namratha Rao
December 12, 2021
in Cooking, Newsbeat, ಅಡುಗೆ
Saakshatv cooking recipes batani bath
Share on FacebookShare on TwitterShare on WhatsappShare on Telegram

ಬ್ರೇಕ್ ಫಾಸ್ಟ್ / ಲಂಚ್ ಗೆ ಈ ರೈಸ್ ಬಾಸ್ , ವೆಜ್ ಬಿರಿಯಾನಿ ರೆಸಿಪಿಗಳನ್ನ ಟ್ರೈ ಮಾಡಿ ನೋಡಿ..!

ಆಲೂಗಡ್ಡೆ ರೈಸ್

ಬೇಕಾಗುವ ‌ಸಾಮಾಗ್ರಿಗಳು

Related posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

July 2, 2026
ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

July 2, 2026

ಅನ್ನ – 1 ಕಪ್
ಎಣ್ಣೆ – 2 ಚಮಚ
ಉದ್ದಿನಬೇಳೆ – 1/2 ಚಮಚ
ಕಡ್ಲೆಬೇಳೆ – 1/2 ಚಮಚ
ಜೀರಿಗೆ – 1/2 ಚಮಚ
ಸಾಸಿವೆ – 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಈರುಳ್ಳಿ ‌- 1
ಹಸಿಮೆಣಸು – 1
ಆಲೂಗಡ್ಡೆ – 1
ಅರಿಶಿನ – 1/4 ಚಮಚ
ಮೆಣಸಿನ ಪುಡಿ – 1/2 ಚಮಚ
ಗರಂಮಸಾಲೆ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆ ರಸ – 1 ಚಮಚ
ಚಿಕ್ಕದಾಗಿ ‌ಕತ್ತರಿಸಿದ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

Saakshatv cooking recipe preparation of potato rice

ಮೊದಲಿಗೆ ಅನ್ನವನ್ನು ಉದುರು ಉದುರಾಗಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆಯನ್ನು ‌ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ. ಆಲೂಗಡ್ಡೆ ಬೆಂದ ಬಳಿಕ ಅರಿಶಿನ, ಮೆಣಸಿನ ಪುಡಿ, ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಮೊದಲೇ ‌ಮಾಡಿಟ್ಟುಕೊಂಡ ಅನ್ನವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ರುಚಿಯಾದ ಆಲೂಗಡ್ಡೆ ರೈಸ್ ಸವಿಯಲು ಸಿದ್ಧವಾಗಿದೆ.

 

ತೊಂಡೆಕಾಯಿ ಪಲಾವ್

ಬೇಕಾಗುವ ಸಾಮಗ್ರಿಗಳು

ತೊಂಡೆಕಾಯಿ – 20
ಬಾಸುಮತಿ ಅಕ್ಕಿ -3 ಕಪ್
ಆಲೂಗಡ್ಡೆ-1
ಈರುಳ್ಳಿ -2
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – 6 ಚಮಚ
ಲಿಂಬೆ ಹಣ್ಣಿನ ರಸ -1 ಚಮಚ
ಅರಿಶಿನ ಚಿಟಿಕೆಯಷ್ಟು

ಮಸಾಲಾ ಪುಡಿ ಸಾಮಗ್ರಿಗಳು

ಕಡಲೆಬೇಳೆ – 1 ಚಮಚ
ಉದ್ದಿನಬೇಳೆ -1 ಚಮಚ
ಕಾಳುಮೆಣಸು – 1/2 ಚಮಚ
ಒಣಗಿರುವ ಕೊಬ್ಬರಿ – 4ಚಮಚ
ಎಳ್ಳು -1 ಚಮಚ
ಕೆಂಪು ಒಣ ಮೆಣಸು
ಕೊತ್ತಂಬರಿ ಬೀಜ- 1ಚಮಚ

ಮಾಡುವ ವಿಧಾನ

ಮೊದಲು ‌ತೊಂಡೆಕಾಯಿಗಳನ್ನು ಉದ್ದಗೆ ಕತ್ತರಿಸಿಕೊಂಡು ಎಣ್ಣೆ ಮತ್ತು ಅರಿಶಿನ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕಡಲೆಬೇಳೆ, ಉದ್ದಿನಬೇಳೆ, ಕಾಳುಮೆಣಸು, ಒಣ ಕೊಬ್ಬರಿ, ಎಳ್ಳು, ಕೆಂಪು ಮೆಣಸು, ಕೊತ್ತಂಬರಿ ಬೀಜಗಳನ್ನು 1 ಚಮಚ ಎಣ್ಣೆಯಲ್ಲಿ ಉರಿದು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಟ್ಟುಕೊಳ್ಳಿ.

ಮಧ್ಯಮ ಉರಿಯಲ್ಲಿ ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಮಸಾಲೆ ಎಲೆಯನ್ನು ಹಾಕಿ ಬಾಡಿಸಿಕೊಳ್ಳಿ. ನಂತರ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಬಾಡಿಸಿಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಈ ಮೊದಲೇ ಹುರಿದಿಟ್ಟುಕೊಂಡಿರುವ ತೊಂಡೆಕಾಯಿಯನ್ನು ಸೇರಿಸಿ. ಹುಡಿ ಮಾಡಿರುವ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಮತ್ತು ನೀರನ್ನು ಹಾಕಿ ಲಿಂಬೆರಸವನ್ನು ಸೇರಿಸಿ. ಕುಕ್ಕರ್ ನಲ್ಲಿ 3 ವಿಸಲ್ ಬರುವವರೆಗೆ ಬೇಯಿಸಿ. ಈಗ ರುಚಿಯಾದ ತೊಂಡೆಕಾಯಿ ಪಲಾವ್ ಸವಿಯಲು ಸಿದ್ಧವಾಗಿದೆ.

 

ವೆಜ್ ಪನೀರ್ ಫ್ರೈಡ್ ರೈಸ್

ಅಕ್ಕಿ – 1 ಕಪ್
ಪನೀರ್ – 200 ಗ್ರಾಂ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ
Saakshatv cooking recipe Paneer fried rice
ಮೊದಲಿಗೆ ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಬಳಿಕ ಪನೀರ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ.

 

ಬಟಾಣಿ ಬಾತ್

ಬೇಕಾಗುವ ಸಾಮಾಗ್ರಿಗಳು

ಅಕ್ಕಿ 1 ಕಪ್
ನೆನೆಸಿದ ಒಣ ಬಟಾಣಿ/ಹಸಿ ಬಟಾಣಿ – 1ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 3
ಕೆಂಪು ಮೆಣಸು – 5
ಕೊತ್ತಂಬರಿಸೊಪ್ಪು – ಸ್ವಲ್ಪ
ಶುಂಠಿ ಬೆಳ್ಳುಳಿ ಪೇಸ್ಟ್ – 1 ಚಮಚ
ಗರಂಮಸಾಲೆ ಪುಡಿ – 1 ಚಮಚ
ಚೆಕ್ಕೆ – 1 ಇಂಚು
ಲವಂಗ – 2
ಮರಾಠಿಮೊಗ್ಗು – 2
ಏಲಕ್ಕಿ – 2
ಪಲಾವ್ ಎಲೆ – 1
ರುಚಿಗೆ ತಕ್ಕಷ್ಟು ಉಪ್ಪು.
ಎಣ್ಣೆ/ತುಪ್ಪ – 2 ಚಮಚ
Saakshatv cooking recipes batani bath

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ಪಕ್ಕದಲ್ಲಿ ಇಡಿ. ಬಳಿಕ ಕೆಂಪು ಮೆಣಸುಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನಕಾಯಿ. ಕೊತ್ತಂಬರಿಸೊಪ್ಪು ಮತ್ತು ನೆನೆಸಿದ ಕೆಂಪು ಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.

ಈಗ ಕುಕ್ಕರಿಗೆ ಎಣ್ಣೆ ಅಥವಾ ತುಪ್ಪ ಹಾಕಿ. ಬಿಸಿಯಾದ ಮೇಲೆ ಚೆಕ್ಕೆ, ಲವಂಗ, ಮರಾಠಿಮೊಗ್ಗು, ಏಲಕ್ಕಿ, ಪಲಾವ್ ಎಲೆ ಸೇರಿಸಿ. ‌ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ಬಳಿಕ ಶುಂಠಿ. ಬೆಳ್ಳುಳಿ ಪೇಸ್ಟ್, ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗರಂ ಮಸಾಲೆ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ.
ನಂತರ ಬಟಾಣಿ, ಅಕ್ಕಿ, ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 3 ವಿಷಲ್ ಬರುವವರೆಗೆ ಬೇಯಿಸಿ.
ಈಗ ರುಚಿಯಾದ ಬಟಾಣಿ ಬಾತ್ ಸವಿಯಲು ಸಿದ್ಧ.

 

ಪನ್ನೀರ್ ಬಿರಿಯಾನಿ

ಬೇಕಾಗುವ ಸಾಮಾಗ್ರಿಗಳು

ಪನ್ನೀರ್ – 1 ಕಪ್
ಭಾಸ್ಮತಿ ಅಕ್ಕಿ 1 ಕಪ್

ಪಲಾವ್ ಎಲೆ 2,
ಚಕ್ಕೆ 1,
ಲವಂಗ 4,
ಏಲಕ್ಕಿ 2,
ಗೋಡಂಬಿ 8-10,
ಪುದೀನಾ ಸೊಪ್ಪು 1 ಕಟ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5-6
ಶುಂಠಿ – ಸಣ್ಣ ತುಂಡು
ಸೋಂಪು – 1 ಚಮಚ
ಗಟ್ಟಿ ಮೊಸರು – 2 ಚಮಚ

ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1,
ಸಣ್ಣಗೆ ಕತ್ತರಿಸಿದ ಹಸಿಮೆಣಸು – 2
ಹೆಚ್ಚಿದ ಟೊಮೆಟೊ – 1

ಮೆಣಸಿನ ಪುಡಿ 1 ಚಮಚ,
ಬಿರಿಯಾನಿ ಮಸಾಲಾ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to cook paneer biryani

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಕತ್ತರಿಸಿಕೊಂಡ ಪನ್ನೀರ್ ತುಂಡುಗಳನ್ನು ಸ್ವಲ್ಪ ಕೆಂಪಗೆ ಆಗುವವರೆಗೆ ಹುರಿಯಿರಿ.
ನಂತರ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ, ಸೋಂಪ್ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಅದಕ್ಕೆ 2 ಚಮಚ ಗಟ್ಟಿ ಮೊಸರು ಸೇರಿಸಿ ಮತ್ತೊಮ್ಮೆ ರುಬ್ಬಿ.

ಈಗ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಗಳನ್ನು ಹುರಿಯಿರಿ. ನಂತರ
ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಹುರಿಯಿರಿ.
ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಉಪ್ಪು, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಹುರಿದಿಟ್ಟುಕೊಂಡ ಪನ್ನೀರ್ ಸೇರಿಸಿ ಚೆನ್ನಾಗಿ ಬೆರೆಸಿ.

 

ಕ್ಯಾಬೇಜ್ ರೈಸ್

ಬೇಕಾಗುವ ಸಾಮಗ್ರಿಗಳು

ಅಕ್ಕಿ 11/2 ಲೋಟ
ಚಿಕ್ಕದಾಗಿ ಹೆಚ್ಚಿದ ಕ್ಯಾಬೇಜ್ 1/2ಕಪ್
ಆಲೂಗಡ್ಡೆ 1
ಗರಂ ಮಸಾಲ – 1ಚಮಚ
ಕೊತ್ತಂಬರಿ ಪುಡಿ – 1/4 ಚಮಚ
ಅರಸಿನ ಪುಡಿ – 1/4 ಚಮಚ,
ಜೀರಿಗೆ ಪುಡಿ – 1/2ಚಮಚ
ಆಲ್ ಸ್ಪೈಸ್ ಎಲೆ – 3
ಕೊತ್ತಂಬರಿ ಸೊಪ್ಪು – ಸ್ವಲ್ಪ
ತುರಿದ ಶುಂಠಿ – 1/4ಚಮಚ
ತುಪ್ಪ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe cabbage rice

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ನಂತರ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ತುಪ್ಪ ಬಿಸಿಯಾದ ಬಳಿಕ ಅದಕ್ಕೆ ಕತ್ತರಿಸಿದ ಕ್ಯಾಬೇಜ್, ಆಲೂಗಡ್ಡೆ, ಶುಂಠಿ ತುರಿ ಸೇರಿಸಿ ಹುರಿಯಿರಿ. ನಂತರ ಅದಕ್ಕೆ ಅರಿಶಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಆಲ್ ಸ್ಪೈಸ್ ಎಲೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ. ನಂತರ ಕುಕ್ಕರ್ ಗೆ ಮುಚ್ಚಳವನ್ನು ಮುಚ್ಚಿ 3 ವಿಸಲ್ ಕೂಗಿಸಿ. ನಂತರ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿ. ಈಗ ರುಚಿಯಾದ ಕ್ಯಾಬೇಜ್ ರೈಸ್ ರಾಯತದ ಜೊತೆ ಸವಿಯಲು ಸಿದ್ಧವಾಗಿದೆ.

ರುಚಿ ಜೊತೆ ಆರೋಗ್ಯಕ್ಕಾಗಿ 5 ಜ್ಯೂಸ್ ಗಳ ರೆಸಿಪಿಗಳು ನಿಮಗಾಗಿ..!

ವೆಜ್ ಪನೀರ್ ಫ್ರೈಡ್ ರೈಸ್

ಬೇಕಾಗುವ ಸಾಮಾಗ್ರಿಗಳು

ಅಕ್ಕಿ – 1 ಕಪ್
ಪನೀರ್ – ಸ್ವಲ್ಪ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ

ಮಾಡುವ ವಿಧಾನ
Saakshatv cooking recipe how to prepare veg paneer fried rice
ಮೊದಲಿಗೆ ಅಕ್ಕಿಯನ್ನು ತೊಳೆದು ಆನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ.ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಹುರಿಯಿರಿ. ಬಳಿಕ ಪನೀರ್ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧ.

5 ರುಚಿಕರ , ಸುಲಭ, ಆರೋಗ್ಯಕರ ಸಿಹಿ ತಿಂಡಿಗಳು ರೆಸಿಪಿಗಳು ನಿಮಗಾಗಿ..!

5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

ರುಚಿಯಾದ ಕ್ಯಾಪ್ಸಿಕಂ ಬಾತ್

ಬೇಕಾಗುವ ಸಾಮಾಗ್ರಿಗಳು

ಅಕ್ಕಿ – 1 ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ – 1/2 ಚಮಚ
ಟೊಮೆಟೊ – 1
ಅರಿಶಿನ – ಚಿಟಿಕೆ
ಬೆಳ್ಳುಳ್ಳಿ ಶುಂಠಿ ಪೇಸ್ಟ್ – 1 ಚಮಚ
ಮೆಣಸಿನ ಹುಡಿ – 1/2 ಚಮಚ
ಪಾವ್ ಬಾಜಿ ಮಸಾಲೆ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ

Capsicum bath

ತಯಾರಿಸುವ ವಿಧಾನ

ಮೊದಲು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ‌ನಂತರ ಸಣ್ಣದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ. ಮೃದುವಾಗುವವರೆಗೆ ಬೇಯಿಸಿ. ಬಳಿಕ ಉಪ್ಪು, ಅರಿಶಿನ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಬೇಯಿಸಿಕೊಳ್ಳಿ. ಬಳಿಕ ಮೆಣಸಿನ ಪುಡಿ ಮತ್ತು ಪಾವ್ ಬಾಜಿ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಕಲಸಿ. ನಂತರ ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಅನ್ನ ಸೇರಿಸಿ ಚೆನ್ನಾಗಿ ಬೆರೆಸಿ. ರುಚಿಯಾದ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧವಾಗಿದೆ.

ಸೂಪರ್ ಟೇಸ್ಟಿ ಮಿಕ್ಸೆಡ್ ವೆಜ್ ಫ್ರೈಡ್ ರೈಸ್

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1 ಕಪ್
ದೊಡ್ಡ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1/2 ಕಪ್
ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1/2 ಕಪ್
ಸಣ್ಣಗೆ ಹೆಚ್ಚಿದ ಬೀನ್ಸ್ – 1/4 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಸೋಯಾ ಸಾಸ್ – 1 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಗಾರ್ಲಿಕ್ ಫ್ರೈಡ್ ರೈಸ್ ಹುಡಿ – 1 ಚಮಚ
ಎಣ್ಣೆ – 3 ಚಮಚ

ಮಾಡುವ ವಿಧಾನ
Saakshatv cooking recipe super tasty fried rice

ಮೊದಲಿಗೆ ಅಕ್ಕಿಯನ್ನು ತೊಳೆದು ಉದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್ ಸೇರಿಸಿ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈಗ ಟೊಮೆಟೊ ಸಾಸ್, ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಗಾರ್ಲಿಕ್ ಫ್ರೈಡ್ ರೈಸ್ ಪೌಡರ್ ಸೇರಿಸಿ ಚೆನ್ನಾಗಿ ಬೆರೆಸಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.‌ ಈಗ ಸೂಪರ್ ಟೇಸ್ಟಿ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ.

ಬದನೆ ಪಲಾವ್

ಬೇಕಾಗುವ ಸಾಮಗ್ರಿಗಳು

ಅಕ್ಕಿ – 2ಕಪ್
ಕೊತ್ತಂಬರಿ ಬೀಜ – 4 ಚಮಚ
ಚಕ್ಕೆ – 2 ತುಂಡು
ಲವಂಗ – 4
ಏಲಕ್ಕಿ – 2
ಪಲಾವ್ ಎಲೆ – 2
ಚಕ್ರಿ ಹೂ – 1
ಎಳ್ಳು – 2 ಚಮಚ
ತುಪ್ಪ – 3 ಚಮಚ
ಎಣ್ಣೆ – 2 ಚಮಚ
ಜೀರಿಗೆ – 1ಚಮಚ
ಈರುಳ್ಳಿ – 2
ಹಸಿಮೆಣಸಿನಕಾಯಿ – 4
ಆಲೂಗಡ್ಡೆ – 1
ಬದನೆಕಾಯಿ – 2
ಬೀನ್ಸ್ – 4
ಕೆಂಪು ಮೆಣಸಿನ ಪುಡಿ – 1ಚಮಚ
ಅರಿಶಿನ ಪುಡಿ – 1/2ಚಮಚ
ನಿಂಬೆ ರಸ – 2ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿಸೊಪ್ಪು – ಸ್ವಲ್ಪ
Saakshatv cookingrecipe brinjal pulav

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು 10 ನಿಮಿಷ ನೆನೆಸಿಡಿ.
ಒಂದು ಬಾಣಲೆಯಲ್ಲಿ ‌ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಚಕ್ರಿ ಹೂ, ಎಳ್ಳು ಹಾಕಿ ಚೆನ್ನಾಗಿ ಹುರಿದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಿ.
ಈಗ ಕುಕ್ಕರ್ ನಲ್ಲಿ ತುಪ್ಪ ಮತ್ತು ‌ಎಣ್ಣೆ ಬಿಸಿ ‌ಮಾಡಿ‌. ಇದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಗಾದ ಬಳಿಕ ಕತ್ತರಿಸಿದ ‌ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ. ಈಗ ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ, ಬದನೆಕಾಯಿ, ಬೀನ್ಸ್ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ರುಬ್ಬಿಟ್ಟುಕೊಂಡ ಪೌಡರ್, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ನೆನೆಸಿಟ್ಟ ಅಕ್ಕಿಯ ನೀರನ್ನು ಸೋಸಿ ಅಕ್ಕಿಯನ್ನು ಸೇರಿಸಿ. 2 ನಿಮಿಷ ಚೆನ್ನಾಗಿ ಬೆರೆಸಿ. ನಂತರ ನೀರು ಸೇರಿಸಿ. ‌ಲಿಂಬೆರಸ ಹಿಂಡಿ.‌ ಕುಕ್ಕರ್ ಮುಚ್ಚಿ ಎರಡು ವಿಸಲ್ ಬರುವವರೆಗೆ ಬೇಯಿಸಿ. ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು ಉದುರಿಸಿದರೆ, ರುಚಿಯಾದ ಬದನೆ ಪಲಾವ್ ಸವಿಯಲು ಸಿದ್ಧ.

ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್

ಬೇಕಾಗುವ ಪದಾರ್ಥಗಳು:

ಅಕ್ಕಿ – 2 ಕಪ್
ತರಕಾರಿಗಳು (ಬೀನ್ಸ್ ಕ್ಯಾರೆಟ್ ಈರುಳ್ಳಿ ಕ್ಯಾಪ್ಸಿಕಂ ಎಲೆಕೋಸು)
ಚಿಕ್ಕದಾಗಿ ಹೆಚ್ಚಿದ‌ ಹಸಿಮೆಣಸು 6
ಈರುಳ್ಳಿ 2
ಬೆಳ್ಳುಳ್ಳಿ 4 ಎಸಳು
ಶುಂಠಿ 1 ಇಂಚು
ಮೆಣಸಿನ ಪುಡಿ – 11/2 ಟೀಸ್ಪೂನ್
ಸೋಯಾ ಸಾಸ್ 2/3 ಟೀಸ್ಪೂನ್
ವಿನೆಗರ್ 2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
Saakshatv cooking recipe fried rice

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಜಜ್ಜಿದ ಬೆಳ್ಳುಳ್ಳಿ ಶುಂಠಿ ಮತ್ತು ಹಸಿಮೆಣಸು ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಅದನ್ನು ಫ್ರೈ ಮಾಡಿ.
Saakshatv cooking recipe fried rice
ನಂತರ ಸೋಯಾ ಸಾಸ್, ವಿನೆಗರ್, ಉಪ್ಪು, ಮೆಣಸಿನ ಹುಡಿ ಸೇರಿಸಿ ಹುರಿಯಿರಿ. ತರಕಾರಿ ಬೆಂದ ಬಳಿಕ‌ ಮಾಡಿಟ್ಟುಕೊಂಡ ಅನ್ನ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈಗ ವೆಜಿಟೇಬಲ್ ಫ್ರೈಡ್ ರೈಸ್ ಸಿದ್ಧವಾಗಿದೆ. ಇದನ್ನು ಸಾಸ್‌ನೊಂದಿಗೆ ಸವಿಯಿರಿ.

ರುಚಿಯಾದ ಮಸಾಲ ಚಿತ್ರಾನ್ನ

ಬೇಕಾಗುವ ಪದಾರ್ಥಗಳು

ಅಕ್ಕಿ 1 1/2 ಪಾವ್
ಎಣ್ಣೆ 4 ಟೀಸ್ಪೂನ್
ಸಾಸಿವೆ 1/2 ಟೀಸ್ಪೂನ್
ನೆಲಕಡಲೆ/ಶೇಂಗಾ 2 ಟೀಸ್ಪೂನ್
ಉದ್ದಿನ ಬೇಳೆ 1 ಟೀಸ್ಪೂನ್
ಕಡ್ಲೆಬೇಳೆ 1ಟೀಸ್ಪೂನ್
ಉಪ್ಪು ರುಚಿಗೆ ‌ತಕ್ಕಷ್ಟು
ನಿಂಬೆ ರಸ 2 ಚಮಚ
Saakshatv cooking recipe masala chitranna

ಮಸಾಲೆಗೆ

ತುರಿದ ತೆಂಗಿನಕಾಯಿ 1/2 ಕಪ್
ಕೆಂಪು ಮೆಣಸು 4
ಬ್ಯಾಡಗಿ ಮೆಣಸು 14
ಕೊತ್ತಂಬರಿ ಬೀಜ 2 ಟೀಸ್ಪೂನ್
ಜೀರಿಗೆ 1 ಟೀಸ್ಪೂನ್
ಬೆಲ್ಲ 1 ಸಣ್ಣ ತುಂಡು

ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ಅನ್ನ ತಯಾರಿಸಿ ಇಟ್ಟುಕೊಳ್ಳಿ.‌ ನಂತರ ತುರಿದ ತೆಂಗಿನಕಾಯಿ, ಕೆಂಪು ಮೆಣಸು, ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಬೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ.
Saakshatv cooking recipe masala chitranna
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆಯನ್ನು ಸೇರಿಸಿ.‌ ಅದು ಸಿಡಿದ ನಂತರ ನೆಲಕಡಲೆ, ಉದ್ದಿನ ಬೇಳೆ, ಕಡ್ಲೆಬೇಳೆ ಸೇರಿಸಿ ಹುರಿಯಿರಿ. ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ. ‌ಎಣ್ಣೆ ಬೇರ್ಪಡುವವರೆಗೆ ಹುರಿಯಿರಿ. ನಂತರ ಉಪ್ಪು ನಿಂಬೆ ರಸ ಸೇರಿಸಿ ತಯಾರಾದ ಅನ್ನದಲ್ಲಿ ಬೆರೆಸಿ.
ರುಚಿಕರವಾದ ಮಸಾಲಾ ಚಿತ್ರಾನ್ನ ಸವಿಯಲು ಸಿದ್ಧ

ಈಗ ಈ ಮಿಶ್ರಣಕ್ಕೆ ಅರ್ಧ ಗಂಟೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ. (1 ಅಳತೆಗೆ ಒಂದುವರೆ ಅಳತೆ ನೀರು) ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಬರುವವರೆಗೆ ಬೇಯಿಸಿ.
ರುಚಿಯಾದ ಪನ್ನೀರ್ ಬಿರಿಯಾನಿ ರೆಡಿಯಾಗಿದೆ. ಇದನ್ನು ರಾಯತ ಜೊತೆ ಸವಿಯಿರಿ.

Tags: #saakshatvcookingFood
ShareTweetSendShare
Join us on:

Related Posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

by Shwetha
July 2, 2026
0

ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

by Shwetha
July 2, 2026
0

ಬೆಂಗಳೂರು ನಮ್ಮ ಮೆಟ್ರೋ ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತು ತನಿಖೆ ನಡೆಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್...

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ಮಾರ್ಗಗಳಾದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಹಾಗೂ...

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

by Shwetha
July 2, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಈಗ...

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram