`ಬಲ್ಲಾಳದೇವ’ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು…! Ballaladeva saaksha tv
ಟಾಲಿವುಡ್ ನ ಸ್ಟಾರ್ ನಟ ರಾಣಾ ದಗ್ಗುಬಾಟಿಗೆ ಇಂದು ಜನ್ಮದಿನದ ಸಂಭ್ರಮ. ಎಸ್ ಎಸ್ ರಾಜಮೌಳಿ ನಿರ್ದೇಶದನ ಬಾಹುಬಲಿ ಮೂಲಕ ಬಲ್ಲಾಳದೇವನಾಗಿ ಇಡೀ ಭಾರತಕ್ಕೆ ಪರಿಚಯವಾದ ರಾಣಾ, ದಿ ಗ್ರೇಟ್ ಪ್ರೊಡ್ಯೂಸರ್ ರಾಮಾನಾಯ್ಡು ಮೊಮ್ಮಗ.
ಸಿನಿಮಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದ ರಾಣಾ 2010ರಲ್ಲಿ ಲೀಡರ್ ಸಿನಿಮಾ ಮೂಲಕ ಬೆಳ್ಳಿ ಪರದೆ ಪ್ರವೇಶಿಸಿದರು. ಲೀಡರ್ ಸಿನಿಮಾ ಟಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು.. ರಾಣಾ ತಮ್ಮ ನಟನೆಗಾಗಿ ಮೊದಲ ಸಿನಿಮಾಗೆ ಫಿಲ್ಮ್‌ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಲೀಡರ್ ಫಿಲಂನಲ್ಲಿ ಕೂಲ್ ಅಂಡ್ ಕಾಮ್ ಹ್ಯಾಂಡ್ಸಮ್ ಬಾಯ್ ಆಗಿ ಕಾಣಿಸಿಕೊಂಡಿದ್ದ ರಾಣಾ, 2011ರಲ್ಲಿ ‘ದಮ್ ಮಾರೋ ದಮ್’ ಮೂಲಕ ಬಾಲಿವುಡ್ ರಂಗ ಪ್ರವೇಶ ಮಾಡಿದರು. ಇದಾದ ಬಳಿಕ ಟಾಲಿವುಡ್ ನಲ್ಲಿ ನೇನು ನಾ ರಾಕ್ಷಸಿ, , ಕೃಷ್ಣಂ ವಂದೇ ಜಗತ್ ಗುರುಂ, ರುದ್ರಮ್ಮದೇವಿ, ಗಾಝಿ, ಅರಣ್ಯ, ನಾನೇ ರಾಜು ನಾನೇ ಮಂತ್ರಿ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನೆಮನಗಳಲ್ಲಿ ಸ್ಥಾನಪಡೆದರು.

ಇನ್ನು 2015 ರಲ್ಲಿ ಬಿಡುಗಡೆಯಾದ ‘ಬಾಹುಬಲಿ’ ಮೂಲಕ ದೇಶಾದ್ಯಂತ ಬಲ್ಲಾಳ ದೇವನಾಗಿ ರಾಣಾ ಪ್ರಖ್ಯಾತಿ ಪಡೆದರು. ಈ ಸಿನಿಮಾಗಾಗಿ ರಾಣಾ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ಮಹೇಶ್ ಬಾಬು ನಟನೆಯ ಸೈನಿಕುಡು ಸಿನಿಮಾದಲ್ಲಿ ವಿಶ್ಯುವಲ್ ಎಫೆಕ್ಟ್ ಕೆಲಸ ಮಾಡಿದ್ದರು. ಆ ಕೆಲಸಕ್ಕಾಗಿ ರಾಣಾ ಟಾಲಿವುಡ್ ನಂದಿ ಪ್ರಶಸ್ತಿ ಪಡೆದಿದ್ದಾರೆ.
ಅಂದಹಾಗೆ ತೆರೆಯ ಮೇಲೆ ಅಬ್ಬರಿಸುವ ರಾಣಾಗೆ ಬಲಗಣ್ಣು ಕಾಣುವುದಿಲ್ಲ. ಎಡಗಣ್ಣು ಮುಚ್ಚಿದ್ರೆ ರಾಣಾಗೆ ಏನೂ ಕಾಣಿಸುವುದಿಲ್ಲ. ಈ ಸಂಗತಿಯನ್ನ ರಾಣಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ








