`ವಾಯ್ಸ್ ಆಪ್ ರಾವಣ್ಣ’ ವಿಡಿಯೋ ರಿಲೀಸ್ virata-parvam saaksha tv
ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ವಿರಾಟ ಪರ್ವಂ ಸಿನಿಮಾದ ವಾಯ್ಸ್ ಆಫ್ ರವನ್ನ ವಿಡಿಯೋ ರಿಲೀಸ್ ಆಗಿದೆ.
ಇಂದು ರಾಣಾ ದಗ್ಗುಬಾಟಿ ಬರ್ತ್ ಡೇ ಅಂಗವಾಗಿ ವಿರಾಟಪರ್ವಂ ಚಿತ್ರತಂಡ ಈ ವಿಡಿಯೋ ಬಿಡುಗಡೆ ಮಾಡಿದೆ.
ಚಿತ್ರವನ್ನು ವೇಣು ಉಡುಗುಲ ನಿರ್ದೇಶಿಸಿದ್ದಾರೆ. “ ಮಾರದುಲೇ ಈ ದೋಪಿಡಿ ದೊಂಗಲ್ಲ ರಾಜ್ಯಂ ಮಾರದುಲೇ ಎಂದು ವಿಡಿಯೋ ಆರಂಭವಾಗುತ್ತಿದೆ.
ಕ್ರಾಂತಿಕಾರಿ ಪ್ರೇಮಕಥೆಯಾಗಿ ಬರುತ್ತಿರುವ ಈ ಚಿತ್ರದಲ್ಲಿ ರಾಣಾ ಕಾಮ್ರೇಡ್ ರಾವಣ್ಣನಾಗಿ ನಟಿಸಿದ್ದಾರೆ.
ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಣಾ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಯಿಪಲ್ಲವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಾಣಾಗೆ ಶುಭಾಶಯ ಕೋರುತ್ತಿದ್ದಾರೆ.









