ರಿಯಲ್ ಹೀರೋ ಆದ ಪವನ್ ಕಲ್ಯಾಣ್..!
ಪವನ್ ಕಲ್ಯಾಣ್.. ಈ ಹೆಸರಿಗೆ ಒಂದು ಪವರ್ ಇದೆ.. ಅದು ಆಂಧ್ರ ಜನತೆಗೆ ಮಾತ್ರ ಅಲ್ಲ ಇಡೀ ಸೌತ್ ಇಂಡಸ್ಟ್ರಿಗೆ ಗೊತ್ತಿದೆ.. ಪವನ್ ಕಲ್ಯಾಣ್ ರೀಲ್ ಲೈಫ್ ನಲ್ಲಿ ಮಾತ್ರ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋನೇ.. ಅಷ್ಟೇ ಡೇರಿಂಗ್ ಕೂಡ.. ನಟನ ಜೊತೆಗೆ ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್ ಎದೆಯುಬ್ಬಿಸಿ ಚಿತ್ರರಂಗಕ್ಕಾಗಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ.. ಸಿನಿಮಾರಂಗದ ಪರ ಧ್ವನಿ ಎತ್ತಿದ್ದು, ಜಗನ್ ಸರ್ಕಾರದ ಜೊತೆಗೆ ದುಷ್ಮನಿ ಕಟ್ಟುಕೊಂಡಿದ್ದಾರೆ..
ಆದ್ರೆ ಈಗ ಅವರು ಮತ್ತೆ ರಿಯಲ್ ಹೀರೋ ಅನ್ನೋದನ್ನ ಪ್ರೂವ್ ಮಾಡಿಕೊಂಡಿದ್ದಾರೆ.. ಹೌದು.. ಪವನ್ ಕಲ್ಯಾಣ್ ಅವರಿಗೆ ಕೇವಲ ಫ್ಯಾನ್ಸ್ ಅಲ್ಲ ತೆಲಂಗಾಣ ಆಂಧ್ರದಲ್ಲಿ ಅವರಿಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ.. ಅವರ ಪವರ್ ಫುಲ್ ಫ್ಯಾಂಡಮ್ ತಾಕತ್ತು ಎಲ್ರಿಗೂ ಗೊತ್ತಿದೆ.. ಪವನ್ ಸ್ಟಾರ್ ಸಿನಿಮಾ ಬರ್ತಿದೆ ಅಂದ್ರೆ ಅದು ಎಷ್ಟು ಅದ್ಧೂರಿಯಾಗಿ ಎಂಟ್ರಿ ಕೊಡುತ್ತೆ ಅನ್ನೋದು ಎಲ್ರಿಗೂ ಗೊತ್ತಿದೆ.. ಅವರ ಸಿನಿಮಾ ಮುಂದೆ ಎಂಥಹದ್ದೇ ದೊಡ್ಡ ಸಿನಿಮಾನೇ ಆಗಿರಲಿ, ರಾಜಮೌಳಿ ಅವರ ಸಿನಿಮಾ ಕೂಡ ಇರ್ಲಿ ಡಲ್ ಆಗುತ್ತೆ..
ಸೆಕ್ಸಿಯಾಗಿ ಕಾಣಿಸೋದು ಮಾತ್ರ ನೆಕ್ಸ್ಟ್ ಲೆವೆಲ್ ಕಷ್ಟ : ಸಮಂತಾ
ಅಷ್ಟಕ್ಕೂ ಅಲ್ಲಿ ರಾಜಮೌಳಿ ಯಾಕ್ ಬಂದ್ರು ಅನ್ನೋ ಕನ್ಫ್ಯೂಷನ್ ಮೂಡೋದು ಸಹಜ.. ಅದಕ್ಕೂ ಉತ್ತರ ಇದೆ.. ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ RRR ಸಿನಿಮಾ ಬಹಳ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಲು ಸಿದ್ಧವಾಗಿದೆ.. ಆದ್ರೆ ಈ ಸಿನಿಮಾ ಜನವರಿ 7 ಕ್ಕೆ ರಿಲೀಸ್ ಆದ್ರೆ ಪವನ್ ಕಲ್ಯಾಣ್ ಅವರ ಬಹುನಿರೀಕ್ಷೆಯ “ಭೀಮ್ಲಾನಾಯಕ್” ಸಿನಿಮಾ ಜನವರಿ 12 ಕ್ಕೆ ರಿಲೀಸ್ ಆಗಿ ಧೂಳೆಬ್ಬಿಸಬೇಕಿತ್ತು.. ಈ ಸಿನಿಮಾಗಾಗಿ ಅಭಿಮಾನಿಗಳಂತೂ ಈಗಲಿಂದಲೇ ಜಾತ್ರೆ ಆರಂಭಿಸಿದ್ದರು.. ಕುತೂಹಲದಿಂದ ಕಾಯ್ತಿದ್ರು..
ಆದ್ರೆ ಜಕ್ಕಣ್ಣನ ಟೀಮ್ ಗೆ ಗೊತ್ತಿತ್ತು.. RRR ಸಿನಿಮಾ ಹೊತ್ತಲ್ಲೇ ಭೀಮ್ಲಾನಾಯಕ್ ರಿಲೀಸ್ ಆದ್ರೆ , RRR ಕಲೆಕ್ಷನ್ ಗೆ ಪೆಟ್ಟು ಬಿದ್ದೇ ಬೀಳುತ್ತೆ ಅನ್ನೋದು.. ಹೀಗಾಗಿಯೇ ರಾಜಮೌಳಿ ಟೀಮ್ ಭೀಮ್ಲಾನಾಯಕ್ , ಪವನ್ ಕಲ್ಯಾಣ್ ಜೊತೆಗೆ ಸಾಕಷ್ಟು ಚರ್ಚೆ ಮಾಡಿ , ಮನವಿ ಮಾಡಿಕೊಂಡು ಸಿನಿಮಾ ಮುಂದೂಡಿಕೆ ಮಾಡುವಂತೆ ಮಾಡಿದೆ.. ಈ ಮೂಲಕ ಪವನ್ ಕಲ್ಯಾಣ್ ತಮ್ಮದೇ ಇಂಡಸ್ಟ್ರಿಯ ಮತ್ತೊಂದು ಸಿನಿಮಾಗೆ ತೊಂದರೆಯಾಗದಂತೆ , ತಾವೇ ಹಿಂದೆ ಸರಿದು ಮತ್ತೊಮ್ಮೆ ತಾವು ರಿಯಲ್ ಹೀರೋ ಅನ್ನೋದನ್ನ ಪ್ರೂವ್ ಮಾಡಿದ್ದಾರೆ..








