ರಾಜ್ಯಕ್ಕೆ ಮೂರನೇ ಅಲೆ ಈಗಾಗಲೇ ಬಂದಿದೆ : ಡಾ.ಕೆ.ಸುಧಾಕರ್ Dr. K. Sudhakar saaksha tv
ರಾಮನಗರ : ರಾಜ್ಯಕ್ಕೆ ಮೂರನೇ ಅಲೆ ಈಗಾಗಲೇ ಬಂದಿದೆ. ಇದು ಮೂರನೇ ಅಲೆಯ ಪ್ರಾರಂಭದ ಹಂತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ Dr. K. Sudhakar saaksha tv ತಿಳಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ.
ಬೆಂಗಳೂರು ಸೇರಿದಂತೆ ದೆಹಲಿ, ಮಹಾರಾಷ್ಟ್ರದಲ್ಲೂ ಕೇಸ್ ಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿಗೆ ವಿಶೇಷ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ ಎಂದಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಶೇ.1.90 ರಷ್ಟು ಕೊರೊನಾ ಕೇಸ್ ಗಳು ಏರಿಕೆಯಾಗಿದ್ದು, 1,290 ಕೇಸ್ ಪತ್ತೆ ಆಗಿದೆ.
ಈಗಾಗಲೇ ಶೇ.90 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಸರ್ಕಾರ ಈ ವಿಚಾರವಾಗಿ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಸುಧಾಕರ್ ತಿಳಿಸಿದ್ದಾರೆ.









