ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ? : ಡಿ.ಕೆ.ಶಿವಕುಮಾರ್ DK Shivakumar saaksha tv
ಬೆಂಗಳೂರು : ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ.
ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಸುಧಾಕರ್ ಮನವಿ ಮಾಡಿದ್ದಾರೆ. ಬಹಳ ಸಂತೋಷ.
ಆದರೆ ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು
ಇದೇ ವೇಳೆ ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ಕೊರೊನಾ ಸ್ಫೋಟವಾದರೆ ಕಾಂಗ್ರೆಸ್ ಹೊಣೆ ಎಂದು ಸುಧಾಕರ್ ಹೇಳಿದ್ದಾರೆ.
ಈಗಾಗಲೇ ನಮ್ಮ ವಿರುದ್ಧ ಕೇಸ್ ಕೂಡ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ ಏಕೆ ಅವರ ವಿರುದ್ಧ ಕೇಸ್ ಮಾಡಿಲ್ಲ ಎಂದು ದೂರಿದರು.









