ಡೆಲ್ಟಾದಷ್ಟೆ ಅಪಾಯಕಾರಿ ಒಮಿಕ್ರಾನ್… ಭಾರತದಲ್ಲಿ ವೇಗವಾಗಿ ಹರಡಲಿದೆ!!
ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳು : ಭಾರತದಲ್ಲಿ ಓಮಿಕ್ರಾನ್ ಸೋಂಕುಗಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದು ದೇಶದ ಜನರಲ್ಲಿ ಆತಂಕ ಉಂಟು ಮಾಡಿದೆ. ಇನ್ನೂ ಕೊರೊನಾದ ಈ ಹೊಸ ರೂಪಾಂತರ ತಳಿ ಓಮಿಕ್ರಾನ್ ಸೊಂಕು ಕೂಡ ಡೆಲ್ಟಾದಷ್ಟೆ ಅಪಾಯಕಾರಿಯಾಗಿದೆ.
ಮೊದಲೇ ಆತಂಕದಲ್ಲಿರುವ ಜನರಿಗೆ ಇದೀಗ ಮೊತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಕೋವಿಡ್ ಸಂಖ್ಯೆಯು ಜನವರಿಯ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಉತ್ತುಂಗಕ್ಕೇರಬಹುದು ಎಂದು ಡಾ ಕ್ರಿಸ್ಟೋಫರ್ ಮುರ್ರೆ ಹೇಳಿದ್ದಾರೆ.
ಭಾರತದಲ್ಲಿ ಡೆಲ್ಟಾ ಉಂಟುಮಾಡಿದ ಅಪಾಯವನ್ನೇ, ಓಮಿಕ್ರಾನ್ ಸೋಂಕು ಸಹ ಮಾಡುವ ಸಾಧ್ಯತೆ ಇದೆ ಎಂದು ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನಿರ್ದೇಶಕ ಮತ್ತು ವಿಶ್ವವಿದ್ಯಾನಿಲಯದ ಆರೋಗ್ಯ ಮಾಪನ ವಿಜ್ಞಾನಗಳ ಅಧ್ಯಕ್ಷ ಡಾ ಕ್ರಿಸ್ಟೋಫರ್ ಮುರ್ರೆ ಹೇಳಿದ್ದಾರೆ.
ಇತರ ದೇಶಗಳಿಗಿಂತ ಭಾರತವು ಕೋವಿಡ್ -19ನ್ನು ಉತ್ತಮವಾಗಿ ನಿರ್ವಹಿಸಿತ್ತು. ಆದರೆ ಮಂಗಳವಾರ ಕೋವಿಡ್ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ. ಇದು ಆತಂಕ ಹೆಚ್ಚು ಮಾಡಿದೆ. ವ್ಯಾಕ್ಸಿನೇಷನ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆದರೆ ಓಮಿಕ್ರಾನ್ ಹೆಚ್ಚಿನ ಸಂಖ್ಯೆಯ ಜನರಿಗೆ ಹರಡುತ್ತದೆ ಮತ್ತು ಅದನ್ನು ತಡೆಯಲು ಸಾಧ್ಯವಾಗದೆ ಇರಬಹುದು.
ಅಲ್ಲದೇ ಕೇವಲ ಎರಡು ತಿಂಗಳ ಅವಧಿಯಲ್ಲಿ ಪ್ರಪಂಚದಾದ್ಯಂತ ಮೂರು ಶತಕೋಟಿ ಸೋಂಕುಗಳಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಭಾರತವು ಡೆಲ್ಟಾ ತರಂಗದ ಸಮಯದಲ್ಲಿ ಕಂಡಷ್ಟು ಸೋಂಕುಗಳನ್ನು ಓಮಿಕ್ರಾನ್ ನಲ್ಲು ನೋಡಬಹುದು ಎಂದು ಕೂಡ ಹೇಳಿದ್ದಾರೆ.









