ಹೊಸದಿಲ್ಲಿ, ಮೇ 15 : ನೈರುತ್ಯ ಮುಂಗಾರು ಈ ವರ್ಷ ನಿಗದಿತ ವೇಳೆಗಿಂತ ನಾಲ್ಕು ದಿನ ತಡವಾಗಿ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ತಲುಪುತ್ತಿದ್ದ ಮುಂಗಾರು ಈ ಬಾರಿ ಜೂನ್ 5ಕ್ಕೆ ಕೇರಳ ತಲುಪಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಕಾರಣ ಮೇ 22ಕ್ಕೆ ಬರಬೇಕಿದ್ದ ಮುಂಗಾರು 6 ದಿನ ಮುಂಚಿತವಾಗಿ ಅಂದರೆ ಮೇ 16ಕ್ಕೆ ತಲುಪಲಿದೆ.
ಕಳೆದ ವರ್ಷ ಮುಂಗಾರು ಎರಡು ದಿನ ಮುಂಚಿತವಾಗಿ ಅಂಡಮಾನ್ ಮತ್ತು ನಿಕೋಬಾರ್ ಗೆ ತಲುಪಿತ್ತು. ಮೇ 20ರಂದು ಬರಬೇಕಿದ್ದ ಮುಂಗಾರು ಮೇ.18ರಂದು ತಲುಪಿತ್ತು. ಕೇರಳದಲ್ಲಿ ಜೂನ್ 8 ಕ್ಕೆ ಮಳೆಗಾಲ ಪ್ರಾರಂಭವಾಗಿದ್ದರೆ, ದೇಶದಾದ್ಯಂತ ಜುಲೈ 19ಕ್ಕೆ ಮಳೆ ಪ್ರಾರಂಭವಾಗಿತ್ತು.
ಈ ವರ್ಷ ಮುಂಗಾರು ಸಾಧಾರಣ ರೀತಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ
ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ...








