ಮದುವೆಗೂ 4 ವರ್ಷ ಮುನ್ನವೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ದೀಪಿಕಾ – ರಣವೀರ್
ಬಾಲಿವುಡ್ ನ ಸ್ಟಾರ್ ಕಪಲ್ ಗಳ ಪೈಕಿ ಒಂದು ಜೋಡಿ ಅಂದ್ರೆ ಅದು ದೀಪಿಕಾ ಹಾಗೂ ರಣವೀರ್ ಸಿಂಗ್ ಜೋಡಿ.. ಈ ಜೋಡಿ 6 ವರ್ಷಗಳಕಾಲ ಪ್ರೀತಿಸಿ ನಂತರ ಅದ್ಧೂರಿಯಾಗಿ ಮದುವೆಯಾಗಿತ್ತು.. ಇವರಿಬ್ಬರಿಗೂ ಪ್ರತ್ಯೇಕವಾಗಿ ಎಷ್ಟು ಅಭಿಮಾನಿಗಳಿದ್ದಾರೋ ಅದಕ್ಕಿಂತ ಹೆಚ್ಚು ಇವರ ಜೋಡಿಗಿದೆ.. ಈ ಜೋಡಿ 2018ರಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.. ಆದ್ರೆ ಇವರಿಬ್ಬರೂ ಮದುವೆಯಾಗುವುದಕ್ಕೂ ನಾಲ್ಕು ವರ್ಷಗಳ ಮೊದಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ..
ಬಾಲಯ್ಯನ ‘ಅಖಂಡ’ OTT ಯಲ್ಲಿ ಯಾವಾಗ..??
ಆದರೆ ಅವರು ಅದಕ್ಕೂ 4 ವರ್ಷಗಳ ಹಿಂದೆಯೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು.. ಅಂದ್ಹಾಗೆ ಈ ವಿಚಾರವನ್ನೂ ಅವರು ಮದುವೆ ಸಂದರ್ಭದಲ್ಲೇ ಹೇಳಿದ್ದರಾದ್ರೂ ಕೂಡ ಆಗ ಯಾರೂ ಅಷ್ಟಾಗಿ ಅದರ ಬಗ್ಗೆ ಯೋಚನೆ ಮಾಡಿರಲಿಲ್ಲ.. ಆದ್ರೆ ಇತ್ತೀಚೆಗೆ ದೀಪಿಕಾ ಪಡುಕೋಣೆ 36ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಾಗ ನೆಟ್ಟಿಗರು ಈ ವಿಚಾರವನ್ನ ಮತ್ತೊಮ್ಮೆ ಮುನ್ನಲೆಗೆ ತಂದರು..








