ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಮಹಾ ಸ್ಫೋಟ ..! covid-19 update Corona infection 129 people mandya saaksha tv
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಮಹಾ ಸ್ಫೋಟವಾಗಿದೆ.
ಜಿಲ್ಲೆಯಲ್ಲಿ ಹಲವು ದಿನಗಳ ಬಳಿಕ ಕೊರೊನಾ ಪ್ರಕರಣ ಸಂಖ್ಯೆ ನೂರರ ಗಡಿದಾಟಿದೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ 129 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 73998 ಕ್ಕೆ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿಂದು 7 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 312ಕ್ಕೆ ಏರಿಕೆಯಾಗಿದೆ.
ಮಂಡ್ಯ 48, ಮದ್ದೂರು 11, ಮಳವಳ್ಳಿ 10, ಪಾಂಡವಪುರ 22, ಶ್ರೀರಂಗಪಟ್ಟಣ 21, ಕೆ.ಆರ್.ಪೇಟೆ 12, ನಾಗಮಂಗಲ 5, ಪ್ರಕರಣಗಳು ಪತ್ತೆಯಾಗಿವೆ.









