ಮೈಸೂರು, ಮೇ 17 : ಕೊರೊನಾ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ ಮೈಸೂರು ಜಿಲ್ಲಾಡಳಿತದ ಕಾರ್ಯಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಮೆಚ್ಚಿಕೊಂಡಿದ್ದಾರೆ. ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು.
ಈ ವೇಳೆ ಶ್ರೀಗಳು ಕೊರೊನಾ ವಿಚಾರದಲ್ಲಿ ಒಳ್ಳೆ ಕೆಲಸ ಮಾಡಿದ್ದೀರಿ, ನಿಮ್ಮ ಪರಿಶ್ರಮದಿಂದ ಬಹುಬೇಗ ಸೋಂಕು ನಿಯಂತ್ರಣಕ್ಕೆ ಬಂದಿದೆ. ಯೂ ಆರ್ ದಿ ಬೆಸ್ಟ್ ಡಿಸಿ ಎಂದು ಡಿಸಿಗೆ ಶಹಬಾಸ್ ಗಿರಿ ನೀಡಿದರು. ಅಲ್ಲದೆ ನಿಮ್ಮ ಪರಿಶ್ರಮದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗ್ತಿದೆ ಎಂದರು. ಶ್ರೀಗಳ ಮಾತಿಗೆ ದನಿಗೂಡಿಸಿದ ಸಚಿವ ಸೋಮಶೇಖರ್, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಳ್ಳೆ ಟೀಂ ವರ್ಕ್ ಆಗಿದೆ. ಹೀಗಾಗಿ ಮೈಸೂರು ಕೊರೊನಾ ಮುಕ್ತವಾಗಿದೆ ಎಂದರು.








