ಬಿಜೆಪಿ ಸೇರಿದ ಬಳಿಕ ಮುಲಾಯಂ ಸಿಂಗ್ ಆಶಿರ್ವಾದ ಪಡೆದ ಅಪರ್ಣಾ ಯಾದವ್
ಯುಪಿ ರಾಜಕೀಯದಲ್ಲಿ ಅಪರ್ಣಾ ಯಾದವ್, ಕುಟುಂಬದ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದ ನಂತರ, ಅಪರ್ಣಾ ಯಾದವ್ ಅವರು ತಮ್ಮ ಮಾವ ಮತ್ತು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಪಡೆಯಲು ಮೊದಲ ಬಾರಿಗೆ ಬಂದಿದ್ದಾರೆ. ಅಪರ್ಣಾ ಯಾದವ್ ಅವರು ಜನವರಿ 20 ರ ಸಂಜೆ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾದರು.
ಈ ಚಿತ್ರವನ್ನು ಸ್ವತಃ ಅಪರ್ಣಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡ ನಂತರ, ಲಕ್ನೋಗೆ ಬಂದಾಗ, ತಂದೆ / ನೇತಾಜಿ ಅವರಿಂದ ಆಶೀರ್ವಾದ ಪಡೆದೆ. ಎಂದು ಬರೆದುಕೊಂಡಿದ್ದಾರೆ.
ಆದದರೆ ಅಪರ್ಣಾ ಬಿಜೆಪಿ ಸೇರಿದ ನಂತರ, ನೇತಾಜಿ (ಮುಲಾಯಂ ಸಿಂಗ್ ಯಾದವ್) ಅವರಿಗೆ ಅಪರ್ಣಾ ಅವರಿಗೆ ವಿವರಿಸಿದ್ದರು, ಆದರೆ ಅವರು ಒಪ್ಪಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಅಖಿಲೇಶ್ ಯಾದವ್ ಹೇಳಿದ್ದಾರೆ. ಆದರೆ, ನೇತಾಜಿ ಹಾಗೂ ಹಿರಿಯರ ಆಶೀರ್ವಾದ ಪಡೆದಿದ್ದೇನೆ ಎಂದು ಅಪರ್ಣಾ ಯಾದವ್ ಹೇಳಿದ್ದರು.
2017 ರಲ್ಲಿ ನಡೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಅಪರ್ಣಾ ಅವರು ಲಕ್ನೋ ಕ್ಯಾಂಟ್‌ನಲ್ಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಅವರಿಂದ ಸೋಲನ್ನು ಎದುರಿಸಬೇಕಾಯಿತು. ಬಿಜೆಪಿಯ ಈ ಕ್ಷೇತ್ರದಿಂದ ಅವರು ಮತ್ತೆ ಸ್ಪರ್ಧಿಸಬಹುದು ಎಂದು ಊಹಿಸಲಾಗಿದೆ. ಬಿಜೆಪಿಯ ಹಿರಿಯ ಸಚಿವ ದಾರಾ ಸಿಂಗ್ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಎಸ್‌ಪಿ ತನ್ನತ್ತ ಸೆಳೆದುಕೊಂಡಿತ್ತು. ಈ ದಿಸೆಯಲ್ಲಿ ಅವರ ಕುಟುಂಬಕ್ಕೆ ಸೆಡ್ಡು ಹೊಡೆಯುವ ಮೂಲಕ ಬಿಜೆಪಿ ದೊಡ್ಡ ಪಣತೊಟ್ಟಿದೆ.








