ಅಪ್ಪು ಕನಸು ನನಸು ಮಾಡಿದ ದೊಡ್ಮನೆ ಕುಟುಂಬ…
ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಸಿನಿಮಾಗಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಪ್ಪು ಹುಟ್ಟು ಹಬ್ಬದಂದೆ ಸಿನಿಮಾ ನೊಡಬೇಕು ಎಂದು ಎದುರುನೋಡುತ್ತಿದ್ದಾರೆ. ಇದಕ್ಕಾಗಿ ಚೇತನ್ ಸಿನಿಮಾಗೆ ಸಂಪೂರ್ಣ ಶ್ರಮ ಹಾಕಿ ಆದಷ್ಟು ಬೇಗ ಸಿನಿಮಾವನ್ನ ಮುಗಿಸುವ ಯೋಜನೆಯಲ್ಲಿದ್ದಾರೆ.
ಈ ಮಧ್ಯೆ ಸಿನಿ ತಂಡ ಅಪ್ಪು ಅಭಿಮಾನಿಗಳಿಗಾಗಿ ಖುಷಿ ಸುದ್ದಿಯೊಂದನ್ನ ನೀಡಿದೆ. ಜೇಮ್ಸ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಜೇಮ್ಸ್ ಶೂಟಿಂಗ್ ಶುರುವಾಗಿದ್ದು ಶಿವಣ್ಣ ಮತ್ತು ರಾಘಣ್ಣ ಇಬ್ಬರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇದನ್ನ ಕೇಳಿ ಅಪ್ಪು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಇನ್ನೊಂದೆಡೆ ಅಪ್ಪು ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಶುರುವಾಗಿದ್ದ ಚಿತ್ರಗಳನ್ನ ಕಂಪ್ಲೀಟ್ ಮಾಡಲು ದೊಡ್ಮನೆ ಮುಂದಾಗಿದೆ. ಅಪ್ಪು ಕನಸಿನ ಯೋಜನೆಗಳನ್ನ ಶೀಘ್ರವೆ ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ಅಡಿಯಲ್ಲಿ ಸಿದ್ದವಾದ ಚಿತ್ರಗಳ ಪೋಸ್ಟರ್ ಗಳನ್ನನ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ದಾನೀಶ್ ಸೇಠ್ ಅಭಿನದ ಒನ್ ಕಟ್ ಟೂ ಕಟ್, ರಂಗಾಯಣ ರಘು ಅಭಿನಯದ ಫ್ಯಾಮಿಲಿ ಪ್ಯಾಕ್ ರಾಮ ರಾಮ ರೆ ಖ್ಯಾತಿಯ ನಟರಾದ ಧರ್ಮಣ್ಣ ಶ್ರೀಧರ್ ಅಭಿನಯದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಮೂರು ಚಿತ್ರಗಳು ಒಟಿಟಿ ಪ್ಲಾಟ್ ಪಾರ್ಮ್ ನಲ್ಲಿ ಬಿಡುಗಡೆಯಾಗಲಿವೆ.
ಅಪ್ಪುನ ಕನಸಿನ ಯೋಜನೆಗಳನ್ನು ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.
.
Taking ahead the vision and dream of Appu. We bring you 3 stories full of love, life and joy.@ashwinipuneet @PrimeVideoIN @PRK_Productions @PRKAudio pic.twitter.com/jo2HCBla9V
— Raghavendra Rajkumar (@iRaghanna) January 21, 2022








