ರಾಜ್ಯದಲ್ಲಿನ 50:50 ನಿಯಮಕ್ಕೆ ಡಿಕೆಶಿ ಗರಂ Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 50:50 ನಿಯಮ ಜಾರಿಗೆ ತಂದಿದೆ. ಈ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಮೆಟ್ರೊದಲ್ಲಿ ಪುಲ್, ವಿಮಾನದಲ್ಲೂ ಸೀಟ್ ಪುಲ್ ಮಾಡಿಕೊಂಡು ಬರಬಹುದು. ನಾನು ನಿನ್ನೆ ತಾನೆ ಹೈದರಾಬಾದ್ನಿಂದ ಫ್ಲೈಟ್ನಲ್ಲಿ ಬಂದೆ. ವಿಮಾನದಲ್ಲಿ ಇರೋ ಸೀಟ್ ಫುಲ್ ಮಾಡಿಕೊಂಡು ಬಂದರು. ಅಲ್ಲಿ ಅಂತರ ಇಲ್ಲ, 50:50 ನಿಯಮನು ಇಲ್ಲ. ಇಲ್ಲಿ ಯಾಕೆ ಅಂತರ. ಲಂಡನಲ್ಲಿ ಎಲ್ಲವೂ ಫ್ರೀ ಬಿಟ್ಟಿಲ್ಲವಾ. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಪ್ಯೂ ಇಲ್ಲ. ಇಲ್ಲಿ ಯಾಕೆ ಕರ್ಪ್ಯೂ ಜಾರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದರು. ಕೇಸ್ ಹೆಚ್ಚಾದಾಗ ಕರ್ಫ್ಯೂ ತೆಗೆದಿದ್ದಾರೆ. ಪಾದಯಾತ್ರೆ ಕಾರಣಕ್ಕೆ ಕರ್ಪ್ಯೂ ತಂದರು. ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡರು. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ ಎಂದು ಹೇಳಿದರು.
ಬೆಲೆ ಏರಿಕೆ ಕುರಿತು ಮಾತನಾಡಿದ ಡಿಕೆಶಿ, ಸರಕಾರ ಮೊದಲು ಸಿಮೆಂಟ್ ಮತ್ತು ಕಬ್ಬಿಣದ ದರ ಇಳಿಸಲಿ. ಬೆಲೆ ಏರಿಕೆ ಮಾಡಿ ಜನರಿಗೆ ಯಾಕೆ ಕಿರುಕುಳ ಕೊಡುತ್ತಿದ್ದೀರಿ, ಕಿರುಕುಳ ಕೊಡುವುದನ್ನು ನಿಲ್ಲಿಸಿ. ಸರಕಾರ ಜನರಿಗೆ ಮೊದಲು ಆದಾಯ ಸಿಗುವ ಕೆಲಸ ಮಾಡಲಿ. ಆಮೇಲೆ ದರ ಏರಿಸಲಿ ಎಂದರು.








