Work From Home: ಉದ್ಯೋಗಿಗಳಿಗೆ ಬಜೆಟ್ ನಲ್ಲಿ ಭಾರಿ ಬೆನಿಫಿಟ್ಸ್ Budget-2022-work-home-employees
ಇನ್ನೇನು ಕೆಲವೇ ದಿನಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022ರ ಬಜೆಟ್ ಅನ್ನು ಪಾರ್ಲಿಮೆಂಟ್ ನಲ್ಲಿ ಮಂಡಿಸಲಿದ್ದಾರೆ.
ಈ ಬಜೆಟ್ ಬಗ್ಗೆ ಸಾಮಾನ್ಯರಿಂದ ಹಿಡಿದು ವ್ಯಾಪಾರ ವರ್ಗದವರು ಭಾರೀ ನಿರೀಕ್ಷೆಯಿಂದ ದೆಹಲಿಯತ್ತ ಮುಖ ಮಾಡಿದ್ದಾರೆ.
ಇದು ಹೀಗಿದ್ದರೇ ಕೊರೊನಾ ಸೋಂಕಿನಿಂದಾಗಿ ಪೂರ್ತಿಯಾಗಿ ವರ್ಕ್ ಫ್ರಂ ಹೋಂಗೆ ಸೀಮಿತವಾಗಿದ್ದ ಉದ್ಯೋಗಿಗಳಿಗೆ ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೆಲ ಅನುಕೂಲಗಳಲ್ಲಿ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
ಕೊರೋನಾ ಸಾಂಕ್ರಾಮಿಕದ ಆಗಮನದಿಂದಾಗಿ ಎಲ್ಲಾ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸಿದ್ದವು.
ಇದು ಆಯಾ ಕಂಪನಿಗಳಿಗೆ ಭಾರಿ ವೆಚ್ಚವನ್ನು ಕಡಿಮೆ ಮಾಡಿದೆ. ಕಂಪನಿಗಳು ತಗ್ಗಿಸಿಕೊಂಡಿರುವ ಭಾರವನ್ನು ಪೂರ್ತಿಯಾಗಿ ಉದ್ಯೋಗಿಗಳ ಮೇಲೆ ಹಾಕಿದೆ ಎಂದು ವರದಿಯಾಗಿದೆ.
ಕೆಲ ಕಂಪನಿಗಳು ಆಯಾ ಖರ್ಚುಗಳನ್ನು ಭರಿಸಿದ್ರೂ, ಉಳಿದ ಕಂಪನಿಗಳು ಆಯಾ ಖರ್ಚುಗಳನ್ನು ಉದ್ಯೋಗಿಗಳ ಮೇಲೆ ಹಾಕಿದೆ.
ಇದರ ಜೊತೆಗೆ ಕಂಪನಿಗಳು ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಂದ ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ ಎಂಬ ಸುದ್ದಿಯೂ ಕೇಳಿ ಬಂದಿದೆ.
ಹೀಗಾಗಿ ಇದಕ್ಕೆ ತಕ್ಕಂತೆ ಉದ್ಯೋಗಿಗಳ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಜೋರಾಗಿ ಕೇಳಿಬಂದಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು 2022ರ ಬಜೆಟ್ ನಲ್ಲಿ ಕೇಂದ್ರ ಚರ್ಚೆ ನಡೆಸುವ ಸಾಧ್ಯತೆ ಇದೆಯಂತೆ.
ನೌಕರರು ಕಚೇರಿಯಿಂದ ಅಲ್ಲದೇ ಮನೆಯಿಂದಲೇ ಕೆಲಸ ಮಾಡುವುದರಿಂದ, ಕರೆಂಟ್ ಬಿಲ್, ಟೀ, ಸ್ನ್ಯಾಕ್ಸ್ ನಂತ ಸೌಕರ್ಯಗಳನ್ನು ಉದ್ಯೋಗಿಗಳು ಸ್ವಂತ ಹಣದಲ್ಲಿ ಭರಿಸಬೇಕಾಗುತ್ತಿದೆ.
ಇದಕ್ಕಾಗಿ ತಮ್ಮ ಸಂಬಳದಿಂದಲೇ ಖರ್ಚು ಮಾಡುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವುದರಿಂದ ಉದ್ಯೋಗಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿದೆ.
ಹೀಗಾಗಿ ತೆರಿಗೆ ಹೊರೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಅದಕ್ಕಾಗಿ ಉದ್ಯೋಗಿಗಳು ಪ್ರಸ್ತುತ ಜಾರಿಯಲ್ಲಿರುವ ಸ್ಟ್ಯಾಂಡರ್ಡ್ ಡಿಡಕ್ಷನ್‌ಗೆ ಹೆಚ್ಚುವರಿ ಡಿಡಕ್ಷನ್ ಅನ್ನು ಕೋರಿಕೊಳ್ಳುತ್ತಿದ್ದಾರೆ ಎನ್ನೋದು ಸಮಾಚಾರ..
2018 ರಲ್ಲಿ, ಸರ್ಕಾರವು ಸ್ಟಾಂಡರ್ಡ್ ಡಿಡಕ್ಷನ್ನನ್ನು ಪ್ರವೇಶಿಸಿತ್ತು. ಅನೇಕ ಉದ್ಯೋಗಿಗಳು ಪ್ರಮಾಣಿತ ಕಡಿತವನ್ನು ಆರಿಸಿಕೊಂಡಿದ್ದಾರೆ.
ಆದ್ರೆ ಸ್ಟಾಂಡರ್ಡ್ ಡಿಡಕ್ಷನ್ ನಲ್ಲಿರುವವರಿಗೆ ಅಡಿಷನಲ್ ಡಿಡಕ್ಷನ್ ಸಿಗುತ್ತಿಲ್ಲ. ಪ್ರಸ್ತುತ ಸ್ಟಾಂಡರ್ಡ್ ಡಿಡಕ್ಷನ್ ನಲ್ಲಿ ವರ್ಕ್ ಫ್ರಂ ಹೋಮ ಅಲವೆನ್ಸ್ ಅನ್ನು ಕವರ್ ಮಾಡಲು ಅವಕಾಶವಿಲ್ಲ.
ಇದು ಮನೆಯಿಂದ ಕೆಲಸ ಮಾಡುವವರಿಗೆ ಪ್ರಸ್ತುತ ಪ್ರಮಾಣಿತ ಕಡಿತದ ಮಿತಿಯನ್ನು ಹೆಚ್ಚಿಸುವ ಅಗತ್ಯವಿದೆ ಅಥವಾ ಹೊಸ ಕೆಲಸದ ವೆಚ್ಚಗಳಿಗಾಗಿ ಹೊಸ ಡಿಡಕ್ಷನ್ ಅನ್ನು ಪರಿಚಯಿಸಬೇಕಾಗಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 16 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರಿಂದ 1 ಲಕ್ಷಕ್ಕೆ ಹೆಚ್ಚಿಸಲು ಕೋರುತ್ತಿದ್ದಾರೆ.