Hijab Controvercy : ಸರ್ಕಾರ ಇರೋದು ಸಂವಿಧಾನದ ಪ್ರಕಾರ ಆಡಳಿತ ನಡೆಸುವುದುಕ್ಕೆ : ಬಿಸಿ ನಾಗೇಶ್
ನಾಳೆ ಬೆಳಗ್ಗೆ ಶುಕ್ರವಾರ ಎಕ್ಸಾಂ ಮಾಡಬೇಡಿ ಅಂತಾರೆ, ಕುರಾನ್ ಪ್ರಕಾರ ಕೆಲ ಸಬ್ಜೆಕ್ಟ್ ಇರಬಾರದು ಅಂತಾರೆ, ಹಾಗೆ ಮಾಡೋದಕ್ಕೆ ಸಾಧ್ಯಾನಾ?, ಸರ್ಕಾರ ಇರೋದು ಸಂವಿಧಾನದ ಪ್ರಕಾರ ಆಡಳಿತ ನಡೆಸುವುದುಕ್ಕೆ ಎಂದು ಹಿಜಾಬ್ ವಿವಾದದ ಕುರಿತಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಹೇಳಿದ್ದಾರೆ.
ಇದೇ ವೇಳೆ ಕೋರ್ಟ್ ಏನು ನಿರ್ಣಯ ತೆಗೆದುಕೊಳ್ಳುತ್ತದೋ ಆ ಪ್ರಕಾರ ಸರ್ಕಾರ ನಡೆದುಕೊಳ್ಳುತ್ತದೆ. ಡಿಸೆಂಬರ್ ನಿಂದ ಇದು ಶುರು ವಾಗಿದೆ, ಬೇಕಾದಷ್ಡು ಸಲ ಸ್ಪಷ್ಟನೆ ಕೊಟ್ಟಿದ್ದೀನಿ. ಮೊದಲು ಇದು ಆರು ಮಕ್ಕಳ ಸಮಸ್ಯೆ ಮಾತ್ರ ಆಗಿತ್ತು. ಸಮಾಜದ ಮುಖಂಡರು ಸೇರಿ ಆರು ಮಕ್ಕಳ ಜೊತೆ ಚರ್ಚೆ ಮಾಡಿ ಬಗೆಹರಿಸಲು ಮುಂದಾಗಿದ್ದರು.
Budget 2022: ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ vs ಕಾಂಗ್ರೆಸ್
ಆದರೆ ಕೆಲವು ರಾಜಕೀಯ ಪಕ್ಷಗಳು ಎಂಟ್ರಿ ಆದಾಗ ಇದು ರಾಜ್ಯದ ಬೇರೆ ಬೇರೆ ಭಾಗಕ್ಕೆ ಹರಡಿತು. ಅಲ್ಲಿ ತನಕ ಕೇಸರಿ ಶಾಲೂ ಬಂದಿರಲಿಲ್ಲ, ನೀಲಿ ಶಾಲೂ ಬಂದಿರಲಿಲ್ಲ. ರಾಜಕೀಯ ಪಕ್ಷಗಳ ನಾಯಕರು ಬಂದ ಮೇಲೆ ಹಿಜಾಬ್ ಕೇಸರಿ ಸಂಘರ್ಷ ನಡೆದಿತ್ತು. ಯಾರು ಜವಾಬ್ದಾರಿ ಯುತ ಸ್ಥಾನದಲ್ಲಿ ಇದ್ದಾರೋ ಅವರೇ ಮೂಲಭೂತ ಹಕ್ಕು ಅಂತ ಹೇಳಿದರು. ಅನೇಕ ಕಾಂಗ್ರೆಸ್ ನಾಯಕರು ಈ ವಿಚಾರ ಮಾತಾಡಿದಾಗ ಇದು ರಾಜ್ಯಕ್ಕೆ ಹಬ್ಬಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ..








