Hijab Controvercy : ಮಕ್ಕಳ ಭವಿಷ್ಯ ಹಾಳ ಆಗಲು ಬಿಡಬಾರದು – ಹೆಚ್ ಡಿಕೆ
ಹಿಜಬ್ ಪ್ರಕರಣ ವಿಸ್ತ್ರತ ಪೀಠಕ್ಕೆ ರವಾನೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆಯಿಂದ ನಡೆದ ವಾದ ಪ್ರತಿವಾದಗಳನ್ನು ಕೇಳಿದ ನ್ಯಾಯಮೂರ್ತಿಗಳು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದ್ದಾರೆ.
ಈಗ ಮೂರು ದಿನಗಳ ರಜೆ ಘೋಷಣೆ ಮಾಡಿದ್ದಾರೆ. ಆರಂಭದಲ್ಲಿಯೇ ಸರ್ಕಾರ ಇದನ್ನು ಮೊಟಕುಗೊಳಿಸಿದ್ದರೆ ಇದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
ಈ ಬೆಳವಣಿಗೆ ಹಿಂದೆ ಮುಸ್ಲಿಂ ಪರ ಹಿಂದು ಪರದ ಎರಡು ಸಂಘಟನೆಗಳಿವೆ. ವಿಸ್ತ್ರತ ಬೆಂಚ್ ತೀರ್ಪು ಕೊಡಲು ಕಾಲಾವಕಾಶ ಆಗಬಹುದು.
ಹೀಗಾಗಿ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು. ಎರಡೂ ಸಮಾಜದ ಎರಡು ಸಂಘಟನೆಗಳು ಇದರ ಹಿಂದಿವೆ.. ನಾನು ಎರಡು ಕಡೆಯ ಸಂಘಟನೆಗಳಿಗೆ ಮನವಿ ಮಾಡ್ತೇನೆ.
ಮಕ್ಕಳ ಭವಿಷ್ಯ ಹಾಳ ಆಗಲು ಬಿಡಬಾರದು. ನಾವೆಲ್ಲರೂ ಕೂಡಿ ಬದುಕಬೇಕಿದೆ ಎಂದಿದ್ದಾರೆ..
ಇದೇ ವೇಳೆ ಮುಂದೆ ಭಗವಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು ನಮ್ಮ ರಾಷ್ಟ್ರಧಜ್ವವನ್ನು ಕೆಳಗಿಳಿಸುವುದು ಯಾರಿಂದಲೂ ಸಧ್ಯವಿಲ್ಲ.. ಹಲವಾರು ಭಾಷಿಕರನ್ನು ಒಗ್ಗೂಡಿಸಿದ್ದೆ ರಾಷ್ಟ್ರ ಧ್ವಜ ಎಂದಿದ್ದಾರೆ..








