ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಲಾ – ಕಾಲೇಜು ಆರಂಭ – ಗೃಹ ಸಚಿವರು.
ಹಿಜಾಬ್ ಮತ್ತು ಕೆಸರಿ ಶಾಲು ವಿವಾದಿಂದ ಸ್ಥಗಿತಗೊಂಡಿದ್ದ ತರಗತಿಗಳನ್ನ ಮತ್ತೆ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಪೊಲೀಸ್ ಭದ್ರತೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೋಮವಾರದಿಂದ ಶಾಲಾ – ಕಾಲೇಜುಗಳು ಆರಂಭವಾಗಲಿವೆ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಸುದ್ದಿಗಾರರನ್ನ ಉದ್ದೇಶಿಸಿ ಹೇಳಿದ್ದಾರೆ. ಸೋಮವಾರದಿಂದ 9,10 ನೇ ತರಗತಿಗಳು ಆರಂಭವಾಗಲಿದ್ದು ಹಂತ ಹಂತವಾಗಿ ಕಾಲೇಜುಗಳನ್ನ ತೆರೆಯಲು ಸರ್ಕಾರ ನಿರ್ಧರಿಸಿದೆ.
ರಾಜ್ಯದ್ಯಂತ ಮುಂಜಾತಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಯಾವುದೇ ಅಹಿತಕರ ಗಲಾಟೆಗಳು ನಡೆಯದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ನಿನ್ನೆ ಮೌಖಿಕ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಇಂದು ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಮುಂದಿನ ಆದೇಶದ ವರೆಗೆ ಧಾರ್ಮಿಕ ನಂಬಿಕೆಗೆ ಸೇರಿದ ಯಾವುದೇ ಕೆಸರಿ ಶಾಲು ಹಿಜಾಬ್ ಮತ್ತು ಧರ್ಮ ಧ್ವಜಗಳನ್ನ ಧರಿಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಅಮೆಜಾನ್ ಉದ್ಯೋಗಿಗಳು ಮಾಸ್ಕ್ ಧರಿಸುವ ಅವಶ್ಯವಿಲ್ಲ, ಆದರೆ…








