ಶೇರ್ ಚಾಟ್ ತೆಕ್ಕೆಗೆ MX Taka Tak ಆಪ್ – 4500 ಕೋಟಿ ಒಪ್ಪಂದ
ಶೇರ್ ಚಾಟ್ ಆಪ್ ನ ಮೂಲ ಕಂಪನಿಯಾದ ಮೊಹಲ್ಲಾ ಟೆಕ್ ತನ್ನ ಪ್ರತಿಸ್ಪರ್ಧಿ MX taka tak short ವೀಡಿಯೋ ಅಪ್ಲಿಕೇಷನ್ ಅನ್ನ ಸ್ವಾಧಿನಪಡಿಸಿಕೊಂಡಿದೆ. ಸುಮಾರು 700 ಮಿಲಿಯನ್ ಡಾಲರ್ ಅಂದರೆ 4500 ಕೋಟಿ ಒಪ್ದಂದದ ಮೂಲಕ ಶೇರ್ ಚಾಟ್, MX taka tak ಆಪ್ ಅನ್ನ ಕೊಂಡುಕೊಂಡಿದೆ.
ನಗದು-ಮತ್ತು-ಸ್ಟಾಕ್ ಒಪ್ಪಂದದಲ್ಲಿ, ಶೇರ್ಚಾಟ್ನ ಮೂಲ ಘಟಕವು ಎಂ ಎಕ್ಸ್ ಟಕಾಟಾಕ್ ಎಂಬ ಕಿರು-ವೀಡಿಯೊ ಪ್ಲಾಟ್ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
2020 ರ ಚೀನಾ ಭಾರತ ಗಡಿ ವಿವಾದ ನಂತರ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಹಲವು ಚೀನಾ ಅಪ್ಲಿಕೇಶನ್ ಗಳನ್ನ ಬ್ಯಾನ್ ಮಾಡಿತ್ತು. ನಂತರ ಭಾರತದ ಶಾರ್ಟ್ ವೀಡಿಯೋಗಳು ಭಾರಿ ಜನಪ್ರಿಯತೆ ಪಡೆಯುತ್ತಿವೆ.
ಶೇರ್ ಚಾಟ್ ಆಪ್ ನ ಮೂಲ ಘಟಕವಾದ ಮೊಹಲ್ಲಾ ಟೆಕ್ ಮೋಜ್ ಹೆಸರಿನ ಕಿರು ವೀಡಿಯೋ ಆಪ್ ಬಿಡುಗಡೆ ಮಾಡಿತ್ತು. ಮೋಜ್ ಆಪ್ ಇಂದು 160 ಮಿಲಿಯನ್ ಬಳಕೆದಾರರನ್ನ ಗಳಿಸಿದೆ. ಇದು ಇನ್ಸ್ಟಾಗ್ರಾಮ್ ರೀಲ್ಸ್ ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿದೆ..








