ಅರತಕ್ಷತೆ ವೇಳೆಯೆ ಮದುಮಗಳ ಸಾವು- ಅಂಗಾಂಗ ದಾನ ಮಾಡಿದ ಕುಟುಂಬಸ್ಥರು
ಸಾವಿರ ಕನಸುಗಳನ್ನ ಕಟ್ಟಿ ಕೊಂಡು ಮದುವೆಯಾಗಿ ಸುಖಜೀವನ ನಡೆಸಬೇಕಿದ್ದ ಯುವತಿಯ ಬಾಳಲ್ಲಿ ವಿಧಿ ಅಟ್ಟಹಾಸ ಮೆರೆದಿದೆ. ಯುವತಿ ಮದುವೆ ರಿಸೆಪ್ಷನ್ ವೇಳೆ ಕುಸಿದು ಬಿದ್ದು ಅಸ್ವಸ್ಥಳಾಗಿದ್ದಾಳೆ. ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ವೈದ್ಯರು ಮದುಮಗನ್ನ ಪರೀಕ್ಷಿಸಿ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದಾರೆ. ಈ ಮನಕುಲುಕುವ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೋಕಿನಲ್ಲಿ.
26 ವರ್ಷದ ಚೈತ್ರ ಬ್ರೈನ್ ಡೆಡ್ ಆಗಿ ಮೃತಪಟ್ಟವರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು, ಅರತಕ್ಷತೆಯ ದಿನವೆ ಮದುಮಗಳು ನಿಧನಳಾಗಿದ್ದು, ಆಕೆಯ ಪೋಷಕರು ಚೈತ್ರಾಳ ಅಂಗಾಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ. ಈ ಕರುಣಾಜನಕ ಮಾಹಿತಿಯನ್ನ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.








