ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶಿಸಿದ ಕೋರ್ಟ್ Saaksha Tv
ಕಲಬುರಗಿ: ಕಲಬುರಿಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್‌ರವರ ಸರ್ಕಾರಿ ಕಾರು ಜಪ್ತಿ ಮಾಡುವಂತೆ ಕಲಬುರಗಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಸಿದೆ
ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆಯವರ 33 ಗುಂಟೆ ಜಮೀನು 2008ರಲ್ಲಿ ಭೀಮಾ ಏತ ನಿರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7.39.632 ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು.
ಕೋರ್ಟ್ ಆದೇಶ ಆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಇದೀಗ ಕೋರ್ಟ್ ಆದೇಶ ಮಾಡಿದೆ. ಕೋರ್ಟ್ ಆದೇಶದ ಹಿನ್ನೆಲೆ ಕಾರು ಜಪ್ತಿಗೆ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಆಗಮಿಸಿದ್ದಾರೆ.
ಕೂಡಲೇ ಎಚ್ಚೆತ್ತ ಭೂಸ್ವಾಧೀನ ಇಲಾಖೆ ಅಧಿಕಾರಿಗಳು ವಕೀಲರೊಂದಿಗೆ ಮತ್ತು ಕಲ್ಲಪ್ಪ ಜೊತೆ ಸಂಧಾನ ನಡೆಸಿ ಚೆಕ್ ಕೋರ್ಟ್ ನೀಡುವುದಾಗಿ ಹೇಳಿದ್ದಾರೆ. ಬಳಿಕ ಕಲ್ಲಪ್ಪ ಅಧಿಕಾರಿಗಳಿಗೆ ಹಣ ಪಾವತಿಸುವಂತೆ ಕಾಲಾವಕಾಶ ನೀಡಿದ್ದಾರೆ.









