D K Shivakumar | ಬಚ್ಚಲು ಬಾಯಿ ಈಶ್ವರಪ್ಪ.. ಡಿಕೆಶಿ ಆಕ್ರೋಶ
ಬೆಂಗಳೂರು : ಈಗ ನಾವು ಆ ಬಚಲು ಬಾಯಿ ಈಶ್ವರಪ್ಪ ರಾಜೀನಾಮೆ ಕೇಳ್ತಾಯಿಲ್ಲ. ಈಶ್ವರಪ್ಪ ಅವರದ್ದು ರಾಷ್ಟ್ರ ದ್ರೋಹದ ಹೇಳಿಕೆ.
ಸ್ವತಃ ಸಿಎಂ ಬೊಮ್ಮಾಯಿ ಅಥವಾ ರಾಜ್ಯಪಾಲರ ಅವರೇ ಈಶ್ವರಪ್ಪ ಅವರನ್ನು ಡಿಸ್ಮಿಸ್ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದೆ. d-k-shivakumar-K S Eshwarappa Banalore
ಇಂದು ಬೆಳಿಗ್ಗೆ ವಿಧಾನಸೌಧದ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಅವರನ್ನ ಡಿಸ್ಮಿಸ್ ಮಾಡುವಂತೆ ಒತ್ತಾಯಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ , ಅದೇ ಸ್ವತಂತ್ರದಿಂದ ಇಂದು ಬೊಮ್ಮಯಿ ಸಿಎಂ ಆಗಿದ್ದಾರೆ, ನಾವು ಶಾಸಕರು ಆಗಿದ್ದೀವಿ. ನಮ್ಮ ಧರಣಿ ಮುಂದುವರೆಯುತ್ತೆ.
ಈಶ್ವರಪ್ಪನ ರಾಜೀನಾಮೆ ಬೇಕಾಗಿಲ್ಲ. ಡಿಸ್ಮಿಸ್ ಮಾಡಬೇಕು. ಬಿಜೆಪಿಯವರು ಅವರನ್ನು ಆಸ್ತಿ ಅಂತ ಮಾತನಾಡ್ತಿದ್ದಾರೆ.
ತಲೆದಂಡ ಅಲ್ಲ ವಜಾ ಮಾಡಬೇಕು. ಬಿಜೆಪಿಯವರಿಗೆ ರಾಷ್ಟ್ರ ಧ್ವಜ ಅಂದ್ರೆ ಏನ್ ಅಂತ ಗೊತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಇದೇ ವೇಳೆ ರಾಜ್ಯದ ಜನರಿಗೆ ಸಂಕಷ್ಟ ಬಂದ ವೇಳೆ ಕಾಂಗ್ರೆಸ್ ಧರಣಿ ಮಾಡಲಿಲ್ಲ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿ. ಕುಮಾರಸ್ವಾಮಿ ಮಾಡ್ಲಿ, ಮಾತಾಡ್ಲಿ ಅದೇನೊ ಟ್ರೈಲರ್ ತೋರಿಸ್ತಿವಿ ಅಂತ ಹೇಳಿದ್ದಾರೆ. ನಾವು ಎಲ್ಲ ನೋಡೊಕ್ಕೆ ರೆಡಿ ಎಂದರು.









