Cooking : ವಿವಿಧ ಬಗೆಯ ರುಚಿಕರ ಮತ್ತು ಆರೋಗ್ಯಕರ ಅಡುಗೆಗಳ ರೆಸಿಪಿಗಳು
ಬೂದುಕುಂಬಳಕಾಯಿ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು
ಬೂದುಕುಂಬಳದ ಸಣ್ಣ ಹೋಳುಗಳು – 2 ಕಪ್,
ಹಸಿಮೆಣಸು – 9ರಿಂದ 10,
ಜೀರಿಗೆ – 1/4 ಚಮಚ,
ಕಾಳುಮೆಣಸು – 6,
ಹಸಿಶುಂಠಿ– 1 ತುಂಡು,
ಉಪ್ಪು – ರುಚಿಗೆ ತಕ್ಕಷ್ಟು,
ಅರಶಿನಪುಡಿ – 1/4 ಚಮಚ,
ಬೆಳ್ಳುಳ್ಳಿ – 3 ಎಸಳು,
ಕಾಯಿತುರಿ – 1/4 ಕಪ್,
ಮೊಸರು – ಅಗತ್ಯವಿರುವಷ್ಟು
ಗೋಡಂಬಿ – ಸ್ವಲ್ಪ
ಅಕ್ಕಿ – 1 ಚಮಚ
ಒಗ್ಗರಣೆಗೆ
ಸಾಸಿವೆ – 1 ಚಮಚ,
ಕರಿಬೇವಿನ ಸೊಪ್ಪು – ಸ್ವಲ್ಪ
ಕೆಂಪು ಮೆಣಸು – 2
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಬೂದುಗುಂಬಳದ ಹೋಳುಗಳನ್ನು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. 1 ಚಮಚ ಅಕ್ಕಿಯನ್ನು 1/2 ಗಂಟೆ ನೀರಲ್ಲಿ ನೆನೆಸಿ. ನಂತರ ಕಾಯಿತುರಿ, ಹಸಿಮೆಣಸು, ಜೀರಿಗೆ, ಗೋಡಂಬಿ, ನೆನೆಸಿದ ಅಕ್ಕಿ, ಹಸಿಶುಂಠಿ, ಬೆಳ್ಳುಳ್ಳಿ, ಗೋಡಂಬಿಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ನಂತರ ಈ ಮಿಶ್ರಣಕ್ಕೆ ಬೆಂದ ಹೋಳುಗಳನ್ನು ಸೇರಿಸಿ ಉಪ್ಪು, ಅರಿಶಿನ ಪುಡಿ, ಇಂಗನ್ನು ಹಾಕಿ ಕುದಿಸಿ. ಬಳಿಕ ಮೊಸರನ್ನು ಸೇರಿಸಿ. ಈಗ ಸಾಸಿವೆ, ಕೆಂಪು ಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ ರೆಡಿ.
ಆಲೂಗಡ್ಡೆ ಪಕೋಡ
ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ – 2 ರಿಂದ 3
1/2 ಕಪ್ ಕಡಲೆ ಹಿಟ್ಟು
1/2 ಟೀಸ್ಪೂನ್ ಅಕ್ಕಿ ಹಿಟ್ಟು
ಅಡಿಗೆ ಸೋಡಾ – ಪಿಂಚ್
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ಅಗತ್ಯವಿರುವಷ್ಟು ನೀರು
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಮಾಡುವ ವಿಧಾನ
ಆಲೂಗಡ್ಡೆಯ ಸಿಪ್ಪೆ ತೆಗೆದು ಮತ್ತು ಅವುಗಳನ್ನು ವೃತ್ತಾಕಾರವಾಗಿ ಕತ್ತರಿಸಿ. ಅವುಗಳನ್ನು ಸ್ವಲ್ಪ ನೀರಿನಲ್ಲಿ ಅದ್ದಿ ಇರಿಸಿ.
ಈಗ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಉಪ್ಪು, ಅಕ್ಕಿ ಹಿಟ್ಟು, ಅಡಿಗೆ ಸೋಡಾ ಮತ್ತು ಕೆಂಪು ಮೆಣಸಿನ ಪುಡಿ ತೆಗೆದುಕೊಳ್ಳಿ.
ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ, ಹಿಟ್ಟನ್ನು ತಯಾರಿಸಿಕೊಳ್ಳಿ.
ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಹಿಟ್ಟು ತುಂಬಾ ತೆಳ್ಳಗಿಲ್ಲ ಎಂದು ಖಚಿತ ಪಡಿಸಿಕೊಳ್ಳಿ.

ಬಾಣಲೆಗೆ ಎಣ್ಣೆಯನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಈಗ ವೃತ್ತಾಕಾರವಾಗಿ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಹಿಟ್ಟಲ್ಲಿ ಅದ್ದಿ, ನಿಧಾನವಾಗಿ ಎಣ್ಣೆಯಲ್ಲಿ ಬಿಡಿ.
ಹಿಟ್ಟಲ್ಲಿ ಅದ್ದಿದ ಆಲೂಗಡ್ಡೆಗಳ ಎರಡೂ ಬದಿಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ ತೆಗೆಯಿರಿ. ಆಲೂಗಡ್ಡೆ ಪಕೋಡಗಳನ್ನು ಕೆಚಪ್ ಅಥವಾ ಪುದಿನಾ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸವಿಯಿರಿ.
ಸಬ್ಬಸಿಗೆ ಸೊಪ್ಪಿನ ಅಂಬಡೆ
ಸಬ್ಬಸಿಗೆ ಸೊಪ್ಪು – 1 ಕಟ್ಟು
ಕಡಲೆಬೇಳೆ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು – 2-3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – 1ಚಮಚ
ಓಮ – 1 ಚಮಚ
ಚಿಕ್ಕದಾಗಿ ಕತ್ತರಿಸಿದ ಶುಂಠಿ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಅಕ್ಕಿ ಹುಡಿ 2 ಚಮಚ
ಮೊದಲಿಗೆ ಕಡಲೆ ಬೇಳೆಯನ್ನು ನೀರಲ್ಲಿ ತೊಳೆದು 1 ರಿಂದ 2 ಗಂಟೆ ನೆನೆಸಿಡಿ . ಬಳಿಕ ಸಬ್ಬಸಿಗೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ನೆನೆಸಿದ ಕಡಲೆ ಬೇಳೆಯನ್ನು ನೀರು ಹಾಕದೆ ಗಟ್ಟಿಯಾಗಿ ರುಬ್ಬಿ.
ಬಳಿಕ ಆ ಹಿಟ್ಟಿಗೆ ಹೆಚ್ಚಿದ ಸೊಪ್ಪು, ಅಕ್ಕಿ ಹುಡಿ, ಶುಂಠಿ, ಉಪ್ಪು, ಜೀರಿಗೆ, ಓಮ ಹಾಕಿ ಚೆನ್ನಾಗಿ ಕಲಸಿ. ನಂತರ ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ, ಉಂಡೆಗಳನ್ನು ಚಪ್ಪಟೆಯಾಗಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಕಾದ ಎಣ್ಣೆಯಲ್ಲಿ ಎರಡೂ ಬದಿಗಳನ್ನು ಚೆನ್ನಾಗಿ ಹುರಿದು ತೆಗೆಯಿರಿ.
ಸಬ್ಬಸಿಗೆ ಸೊಪ್ಪಿನ ಅಂಬಡೆ ಸವಿಯಲು ಸಿದ್ಧ.
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು
ತಣ್ಣಗಿನ ಹಾಲು – 1/4 ಲೀಟರ್
ಕೋಕಾ ಪೌಡರ್ – 2 ಚಮಚ
ಸಕ್ಕರೆ – 2-3 ಚಮಚ
ವೆನಿಲ್ಲಾ ಐಸ್ ಕ್ರೀಂ – 1 ಸ್ಕೂಪ್
ಚಾಕಲೇಟ್ ಸಿರಪ್ – 2 ಚಮಚ
ವಿಪ್ಡ್ ಕ್ರೀಮ್/ಐಸ್ ಕ್ರೀಮ್/ಚಾಕಲೇಟ್ ತುರಿ – 1 ಚಮಚ(ಬೇಕಿದ್ದರೆ)
ಐಸ್ ಕ್ಯೂಬ್ – 8

ಮಾಡುವ ವಿಧಾನ
ಮೊದಲು ಹಾಲು, ಕೋಕಾ ಪೌಡರ್, ಸಕ್ಕರೆ, ವೆನಿಲ್ಲಾ ಐಸ್ ಕ್ರೀಂ, 6 ಐಸ್ ಕ್ಯೂಬ್ಸ್ ಗಳನ್ನು ಬ್ಲೆಂಡರ್ ಗೆ ಹಾಕಿ ಬ್ಲೆಂಡ್ ಮಾಡಿ.
ನಂತರ ಚಾಕಲೇಟ್ ಸಿರಪ್ ನಿಂದ ಗ್ಲಾಸನ್ನು ಅಲಂಕರಿಸಿ ಅದಕ್ಕೆ ಬ್ಲೆಂಡ್ ಮಾಡಿದ ಚಾಕಲೇಟ್ ಮಿಲ್ಕ್ ಶೇಕ್ ಅನ್ನು ಸೇರಿಸಿ. ನಂತರ ವಿಪ್ಡ್ ಕ್ರೀಮ್ ಮತ್ತು ಐಸ್ ಕ್ಯೂಬ್ ಅನ್ನು ಮೇಲಿಂದ ಹಾಕಿ ಸರ್ವ್ ಮಾಡಿ.
ವೆಜಿಟೇಬಲ್ ಫ್ರೈಡ್ ರೈಸ್
ಬೇಕಾಗುವ ಪದಾರ್ಥಗಳು:
ಅಕ್ಕಿ – 2 ಕಪ್
ತರಕಾರಿಗಳು (ಬೀನ್ಸ್ ಕ್ಯಾರೆಟ್ ಈರುಳ್ಳಿ ಕ್ಯಾಪ್ಸಿಕಂ ಎಲೆಕೋಸು)
ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು 6
ಈರುಳ್ಳಿ 2
ಬೆಳ್ಳುಳ್ಳಿ 4 ಎಸಳು
ಶುಂಠಿ 1 ಇಂಚು
ಮೆಣಸಿನ ಪುಡಿ – 11/2 ಟೀಸ್ಪೂನ್
ಸೋಯಾ ಸಾಸ್ 2/3 ಟೀಸ್ಪೂನ್
ವಿನೆಗರ್ 2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಜಜ್ಜಿದ ಬೆಳ್ಳುಳ್ಳಿ ಶುಂಠಿ ಮತ್ತು ಹಸಿಮೆಣಸು ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಅದನ್ನು ಫ್ರೈ ಮಾಡಿ.

ನಂತರ ಸೋಯಾ ಸಾಸ್, ವಿನೆಗರ್, ಉಪ್ಪು, ಮೆಣಸಿನ ಹುಡಿ ಸೇರಿಸಿ ಹುರಿಯಿರಿ. ತರಕಾರಿ ಬೆಂದ ಬಳಿಕ ಮಾಡಿಟ್ಟುಕೊಂಡ ಅನ್ನ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈಗ ವೆಜಿಟೇಬಲ್ ಫ್ರೈಡ್ ರೈಸ್ ಸಿದ್ಧವಾಗಿದೆ. ಇದನ್ನು ಸಾಸ್ನೊಂದಿಗೆ ಸವಿಯಿರಿ.








